alex Certify ಬಾದಾಮಿಯನ್ನು ಸಿಪ್ಪೆ ಸುಲಿದೇ ತಿನ್ನಬೇಕ; ಇದರ ಹಿಂದಿರುವ ಶಾಕಿಂಗ್‌ ಸಂಗತಿ ಬಿಚ್ಚಿಟ್ಟಿದ್ದಾರೆ ಸದ್ಗುರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾದಾಮಿಯನ್ನು ಸಿಪ್ಪೆ ಸುಲಿದೇ ತಿನ್ನಬೇಕ; ಇದರ ಹಿಂದಿರುವ ಶಾಕಿಂಗ್‌ ಸಂಗತಿ ಬಿಚ್ಚಿಟ್ಟಿದ್ದಾರೆ ಸದ್ಗುರು…..!

ಬಾದಾಮಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ತಿನ್ನುವಾಗ ಸರಿಯಾದ ವಿಧಾನವನ್ನು ಅನುಸರಿಸಬೇಕು. ಬಾದಾಮಿಯನ್ನೇ ಹಾಗೇ ತಿನ್ನುವ ಬದಲು ನೀರಿನಲ್ಲಿ ನೆನೆಸಿಟ್ಟು, ನಂತರ ಸಿಪ್ಪೆ ಸುಲಿದುಕೊಂಡು ತಿನ್ನಬೇಕು.

ಬಾದಾಮಿಯನ್ನು ಸಿಪ್ಪೆ ಸಮೇತ ಏಕೆ ತಿನ್ನಬಾರದು ಎಂಬುದನ್ನು  ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ವಿವರಿಸಿದ್ದಾರೆ. ಸದ್ಗುರು ಅವರೇ ಹೇಳುವ ಪ್ರಕಾರ ಬಾದಾಮಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದ ನಂತರ ತಿನ್ನಬೇಕು. ಈ ವಿಧಾನವು ಬಾದಾಮಿಯ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಬಾದಾಮಿಯಂತಹ ಬೀಜಗಳು ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮದೇ ಆದ ಕಾರ್ಯವಿಧಾನಗಳನ್ನು ಹೊಂದಿವೆ. ಅವುಗಳನ್ನು ನೆನೆಸಿದಾಗ ಕೀಟಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಳಸುವ ವಿಷಕಾರಿ ಅಂಶಗಳನ್ನು ತ್ಯಜಿಸುತ್ತವೆ.

ಕ್ಯಾನ್ಸರ್‌ಗೆ ಕಾರಣವಾಗಬಹುದು ಬಾದಾಮಿ ಸಿಪ್ಪೆ!

ಬಾದಾಮಿಯು ಒಂದು ರೀತಿಯ ಕಾರ್ಸಿನೋಜೆನಿಕ್ ರಾಸಾಯನಿಕವನ್ನು ಹೊಂದಿರುತ್ತದೆ. ಇದು ಸಿಪ್ಪೆಯ ಕೆಳಗೆ ಇರುತ್ತದೆ, ಇದರಿಂದಾಗಿ ಕೀಟಗಳು ಅದರ ಮೇಲೆ ದಾಳಿ ಮಾಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಪ್ಪೆ ತೆಗೆಯದೇ ಬಾದಮಿ ತಿಂದರೆ ಆರೋಗ್ಯ ಕೆಡುತ್ತದೆ. ಕ್ಯಾನ್ಸರ್‌ಗೂ ಇದು ಕಾರಣವಾಗಬಹುದು. ಆದ್ದರಿಂದ ಇದನ್ನು ನೆನೆಸಿ ಸಿಪ್ಪೆ ಸುಲಿದ ನಂತರವೇ ತಿನ್ನಬೇಕು.

ಬಾದಾಮಿಯು ಪೋಷಕಾಂಶಗಳ ಖಜಾನೆ. ನೆನೆಸಿದ ಬಾದಾಮಿಯನ್ನು ಪ್ರತಿನಿತ್ಯ ಒಂದು ಹಿಡಿ ತಿನ್ನುವುದರಿಂದ ಹೃದಯದ ಆರೋಗ್ಯವನ್ನು  ಕಾಪಾಡಿಕೊಳ್ಳಬಹುದು. ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ಇದು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿರುವ ವಿಟಮಿನ್ ಇ, ತ್ವಚೆಯನ್ನು ಕಾಂತಿಯುತವಾಗಿಸುತ್ತದೆ ಮತ್ತು ಕೂದಲನ್ನು ಬಲಪಡಿಸುತ್ತದೆ. ಬಾದಾಮಿ ತಿನ್ನುವುದರಿಂದ ನೆನಪಿನಶಕ್ತಿ ಸುಧಾರಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...