alex Certify ತ್ವಚೆಯ ಮೃದುತ್ವ ಮತ್ತು ಕಾಂತಿಯನ್ನು ಇಮ್ಮಡಿಗೊಳಿಸುತ್ತೆ ಬಾದಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆಯ ಮೃದುತ್ವ ಮತ್ತು ಕಾಂತಿಯನ್ನು ಇಮ್ಮಡಿಗೊಳಿಸುತ್ತೆ ಬಾದಾಮಿ

ಬಾದಾಮಿ ಕೇವಲ ತಿನ್ನುವುದಕ್ಕಷ್ಟೇ ಹಿತವಲ್ಲ. ಅದು ಅತ್ಯದ್ಭುತ ಸೌಂದರ್ಯವರ್ಧಕವು ಹೌದು. ಚೀನಾದ ಆಯುರ್ವೇದದಲ್ಲಿ ಬಾದಾಮಿ ಎಣ್ಣೆಯನ್ನು ನೂರಾರೂ ವರ್ಷಗಳಿಂದ ಬಳಸುತ್ತಿದ್ದಾರೆ. ತ್ವಚೆಯ ಮೃದುತ್ವ ಮತ್ತು ಕಾಂತಿಯನ್ನು ಇಮ್ಮಡಿಗೊಳಿಸುವ ಶಕ್ತಿ ಬಾದಾಮಿಗಿದೆ. ಈ ಹಿನ್ನೆಲೆಯಲ್ಲಿ ವಾರಕ್ಕೊಮ್ಮೆಯಾದರೂ ಬಾದಾಮಿ ಎಣ್ಣೆಯಿಂದ ಮುಖವನ್ನು ಹತ್ತು ನಿಮಿಷ ಮಸಾಜ್ ಮಾಡುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಬಾದಾಮಿ ಎಣ್ಣೆಯಲ್ಲಿ ಏನಿದೆ ಗೊತ್ತಾ?

ಬಾದಾಮಿಯಲ್ಲಿರುವ ವಿಟಮಿನ್ ಎ ಹೊಸ ಚರ್ಮದ ಕೋಶಗಳ ಉತ್ಪಾದನೆಗೆ ನೆರವಾಗುತ್ತದೆ. ವಿಟಮಿನ್ ಇ ಪೋಷಕಾಂಶ ಜೀವಕೋಶದ ಹಾನಿಯನ್ನು ತಡೆಯುತ್ತದೆ. ಒಮೆಗಾ 3 ಫ್ಯಾಟಿ ಆಸಿಡ್ಸ್ ತ್ವಚೆಗೆ ಆವರಿಸುವ ಅಕಾಲಿಕ ಮುಪ್ಪನ್ನು ನಿವಾರಿಸುತ್ತದೆ. ಬಾದಾಮಿಯಲ್ಲಿರುವ ಸತುವಿನ ಅಂಶ ಮೊಡವೆ ಬಾರದಂತೆ ತಡೆಯುತ್ತದೆ.

ಬಾದಾಮಿ ಎಣ್ಣೆಯ ಪ್ರಯೋಜನಗಳು

ಕಣ್ಣಿನ ಊತ ಕಡಿಮೆ ಆಗುತ್ತದೆ : ಕೆಲವರಿಗೆ ಕಣ್ಣಿನ ಸುತ್ತಲೂ ಊತ ಕಂಡು ಬರುತ್ತದೆ. ಬಾದಾಮಿ ಎಣ್ಣೆಯ ಮಸಾಜ್ನಿಂದ ಇದಕ್ಕೆ ಉಪಶಮನ ಸಿಗುತ್ತದೆ.

ತ್ವಚೆಗೆ ಉತ್ತಮ ಬಣ್ಣ ನೀಡುತ್ತದೆ: ತ್ವಚೆಯ ಕಲೆಗಳನ್ನು ಮಾಯಾ ಮಾಡಿ ಸರಿಯಾದ ಸ್ಕಿನ್ ಟೋನ್ ನೀಡುತ್ತದೆ.

ತ್ವಚೆಯ ಶುಷ್ಕತೆ ನಿವಾರಿಸುತ್ತದೆ : ಒಣ ಚರ್ಮದಿಂದ ಉಂಟಾಗುವ ಸೋರಿಯಾಸಿಸ್ ನಂತಹ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಬಿರುಕು, ಶುಷ್ಕತೆ ನಿಯಂತ್ರಿಸಲು ನಿಯಮಿತವಾಗಿ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದು ಪ್ರಯೋಜನಕಾರಿ.

ಮೊಡವೆ ನಿಯಂತ್ರಣ : ಬಾದಾಮಿ ಎಣ್ಣೆಯಲ್ಲಿರುವ ಕೊಬ್ಬಿನ ಅಂಶದ ಕಾರಣದಿಂದಾಗಿ ತ್ವಚೆಯ ಮೇಲಿನ ಹೆಚ್ಚಿನ ಎಣ್ಣೆ ಅಂಶವು ನಿವಾರಣೆಯಾಗುತ್ತದೆ. ಆ ಮೂಲಕ ತ್ವಚೆಯಲ್ಲಿ ಉಂಟಾಗುವ ಮೊಡವೆಗಳಿಂದ ಮುಕ್ತಿ ಹೊಂದಬಹುದು.

ಸೂರ್ಯನ ಕಿರಣಗಳಿಂದ ರಕ್ಷಣೆ : ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿದ್ದು, ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...