alex Certify ಅಲ್ಲು ಅರ್ಜುನ್​ ಗೆ ಅಭಿಮಾನಿಯಿಂದ ಸಿಗ್ತು ವಿಶೇಷ ಉಡುಗೊರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲು ಅರ್ಜುನ್​ ಗೆ ಅಭಿಮಾನಿಯಿಂದ ಸಿಗ್ತು ವಿಶೇಷ ಉಡುಗೊರೆ..!

ಯುಎಇಗೆ ತೆರಳಿದ್ದ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಮರೆಯಲಾಗದ ಉಡುಗೊರೆಯೊಂದು ದೊರಕಿದೆ. ಹೌದು..! ರಿಯಾಜ್​​ ಕಿಲ್ಟೋನ್​ ಎಂಬ ಮಲಯಾಳಿ ಉದ್ಯಮಿಯು ಅಲ್ಲು ಅರ್ಜುನ್​ಗೆ ಬರೋಬ್ಬರಿ 160 ವರ್ಷ ಪುರಾತನ ಪಿಸ್ತೂಲ್​ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಲ್ಲು ಅರ್ಜುನ್​ ಕೊನೆಯದಾಗಿ ತ್ರಿವಿಕ್ರಮ್​ ಶ್ರೀನಿವಾಸ್​​ ನಿರ್ದೇಶನದ ಅಲಾ ವೈಕುಂಟಪುರಮುಲು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಏಕಕಾಲದಲ್ಲಿ ಕೇರಳದಲ್ಲಿ ಅಂಗು ವೈಕುಟಂಪುರಥು ಆಗಿ ತೆರೆಕಂಡಿತ್ತು. ಈ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಯ್ತು ಅಂದರೆ 2020ರ ಬ್ಲಾಕ್​ ಬಸ್ಟರ್​ ಹಿಟ್​ನಲ್ಲಿ ಸ್ಥಾನ ಪಡೆದಿದೆ. ಈ ಸಿನಿಮಾ ಇದೀಗ ನೆಟ್​ಫ್ಲಿಕ್ಸ್​ನಲ್ಲೂ ಲಭ್ಯವಿದೆ. ಸದ್ಯ ಅಲ್ಲು ಅರ್ಜುನ್​ರ ಪುಷ್ಪಾ ಸಿನಿಮಾಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ.

ಇತ್ತೀಚೆಗಷ್ಟೇ ಯುಎಇಗೆ ಭೇಟಿ ನೀಡಿದ್ದ ಅಲ್ಲು ಅರ್ಜುನ್​ಗೆ ಅಭಿಮಾನಿ ಈ ರೀತಿಯಾಗಿ ಸಪ್ರೈಸ್​ ನೀಡಿದ್ದಾರೆ. ಮಲಯಾಳಿ ಉದ್ಯಮಿ ರಿಯಾಜ್​ ಕಿಲ್ಟೋನ್​ ಈ ಪುರಾತನ ಪಿಸ್ತೂಲ್​ ಉಡುಗೊರೆಯಾಗಿ ನೀಡಿದ್ದು ಇದರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸದ್ಯ ಅಲ್ಲು ಅರ್ಜುನ್​ ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಭಾಗವು ಈ ವರ್ಷದ ಕ್ರಿಸ್​ಮಸ್​ನಲ್ಲಿ ತೆರೆಕಾಣಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಫಹಾದ್​ ಫಾಸಿಲ್​ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಪುಷ್ಪಾ ಹೊರತುಪಡಿಸಿ ಅಲ್ಲು ಅರ್ಜುನ್ ನಿರ್ದೇಶಕರಾದ​ ವೇಣು ಶ್ರೀರಾಮ್​ ಹಾಗೂ ಕೋರಾಟಲ ಶಿವರ ಸಿನಿಮಾಗಳಿಗೂ ಸಹಿ ಹಾಕಿದ್ದಾರೆ. ಇದರ ಜೊತೆಯಲ್ಲಿ ನಿರ್ದೇಶಕ ಎ.ಆರ್.​ ಮುರುಗಡೋಸ್​ ಹಾಗೂ ಕೆಜಿಎಫ್​ ಸೂತ್ರಧಾರಿ ಪ್ರಶಾಂತ್​ ನೀಲ್​ ಜೊತೆಯೂ ಮಾತುಕತೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...