ಪ್ರಸ್ತುತ ಸೂಚಿಸಲಾಗಿರುವ 84 ದಿನಗಳ ಅಂತರಕ್ಕೂ ಮೊದಲು ಅನಿವಾರ್ಯ ಕಾರಣಗಳಿಂದ 2 ಡೋಸ್ ಲಸಿಕೆಯನ್ನು ಸ್ವೀಕರಿಸಲು ಇಚ್ಛಿಸುವವರಿಗೆ ಮೊದಲ ಡೋಸ್ ಕೋವಿಶೀಲ್ಡ್ ಪಡೆದ ನಾಲ್ಕು ವಾರದ ಬಳಿಕ ಕೋವಿನ್ ಪೋರ್ಟಲ್ನಲ್ಲಿ ವೇಳಾಪಟ್ಟಿಯನ್ನು ಬದಲಾಯಿಸಲು ಅವಕಾಶ ನೀಡುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೇಂದ್ರಕ್ಕೆ ನಿರ್ದೇಶನ ನೀಡಿದ ನ್ಯಾಯಮೂರ್ತಿ ಪಿ.ಬಿ. ಸುರೇಶ್ ಕುಮಾರ್, ವಿದೇಶಕ್ಕೆ ಪ್ರಯಾಣ ಮಾಡುವ ಜನತೆಗೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ 84 ದಿನಗಳ ಅಂತರವನ್ನು ಮೊದಲ ಡೋಸ್ ಪಡೆದ ನಾಲ್ಕು ವಾರದ ಬಳಿಕ ಕಡಿಮೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವಕಾಶ ನೀಡಬೇಕು. ಇದರಿಂದ ವಿದೇಶಕ್ಕೆ ಪ್ರಯಾಣಿಸುವವರು ಇನ್ನಷ್ಟು ಸುರಕ್ಷಿತವಾಗಿರಲು ಸಾಧ್ಯ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಲಸಿಕೆ ಪಡೆಯುವ ಸೌಲಭ್ಯ ಶುರುವಾದಾಗಿನಿಂದಲೇ ಜನರಿಗೆ ಮುಂಚಿತವಾಗಿ ಡೋಸ್ ಪಡೆಯಲು ಕೇಂದ್ರ ಆರೋಗ್ಯ ಸಚಿವಾಲಯದ ನೀತಿಯೇ ಹೇಳುತ್ತದೆ ಎಂದು ಹೈಕೋರ್ಟ್ ಜ್ಞಾಪಿಸಿದೆ.