ಟೆಲಿಕಾಂ ನಿಯಂತ್ರಕ ಟ್ರಾಯ್ ದೇಶದ ಎಲ್ಲಾ ಮೊಬೈಲ್ ಬಳಕೆದಾರರಿಗೆ ಪೋರ್ಟ್ ಔಟ್ ಆಗುವ ಎಸ್‌ಎಂಎಸ್ ಸೌಲಭ್ಯಗಳನ್ನು, ಯಾವುದೇ ಬೆಲೆಯ ಆಫರ್, ವೌಚರ್ ಅಥವಾ ಪ್ಲಾನ್‌ಗಳನ್ನು ಬಳಸುತ್ತಿದ್ದರೂ, ಒದಗಿಸಬೇಕೆಂದು ಟೆಲಿಕಾಂ ಸೇವಾದಾರರಿಗೆ ಆದೇಶ ನೀಡಿದೆ.
ಕೆಲವೊಂದು ವೌಚರ್‌ಗಳ ಮೇಲೆ ಎಸ್‌ಎಂಎಸ್ ಸೌಲಭ್ಯ ನೀಡದೇ ಇರುವ ಟೆಲಿಕಾಂ ಕಂಪನಿಗಳ ನಡೆಯನ್ನು ಗಮನಿಸಿರುವ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.
ತಮ್ಮ ಪ್ರೀಪೇಯ್ಡ್ ಖಾತೆಗಳಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದ್ದರೂ ಸಹ ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಅಗತ್ಯವಾದ ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ಸೃಷ್ಟಿಸಲು 1900ಕ್ಕೆ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಚಂದಾದಾರಿಂದ ತನಗೆ ದೂರುಗಳು ಬಂದಿರುವುದಾಗಿ ಟ್ರಾಯ್ ತಿಳಿಸಿದೆ.
“ಹೀಗಾಗಿ, ಈಗ ಪ್ರಾಧಿಕಾರವು…… ಎಲ್ಲಾ ಸೇವಾದಾರರಿಗೂ, ತಕ್ಷಣದ ಪ್ರಭಾವದಿಂದಲೇ, ಎಲ್ಲಾ ಮೊಬೈಲ್ ಚಂದಾದಾರರಿಗೂ, ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್, ಯುಪಿಸಿ ವಿನಂತಿಸಿದಾಗ, ಶಾರ್ಟ್ ಕೋಡ್ ಕೋರಿ 1900ಕ್ಕೆ ಎಸ್‌ಎಂಎಸ್ ಕಳುಹಿಸಿ, ದೂರಸಂಪರ್ಕ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ನಿಯಂತ್ರಣಗಳು, 2009ರ ಅನ್ವಯ, ತಮ್ಮ ಪಾಲಿನ ಪೋರ್ಟಿಂಗ್ ಹಕ್ಕನ್ನು ಬಳಸಲು, ಟ್ಯಾರಿಫ್/ವೌಚರ್‌ಗಳ ಬದಲಿಗೆ ಕೊಡಮಾಡಬೇಕು,” ಎಂದು ಟ್ರಾಯ್ ತನ್ನ ನಿರ್ದೇಶನದಲ್ಲಿ ತಿಳಿಸಿದೆ.
ಎಂಎನ್‌ಪಿ ಕೋರಿ ಎಸ್‌ಎಂಎಸ್ ಕಳುಹಿಸಲು ಕೆಲವೊಂದು ಪ್ರೀಪೇಯ್ಡ್ ವೌಚರ್‌ಗಳು/ಪ್ಲಾನ್‌ಗಳಲ್ಲಿ ಅವಕಾಶ ನೀಡದೇ ಇರುವುದು ಕಾನೂನಿನ ಉಲ್ಲಂಘನೆಯಾದಂತೆ ಆಗುತ್ತದೆ ಎಂದು ಟ್ರಾಯ್ ಹೇಳಿದೆ.