ಕಲಬುರಗಿ : ಜಿಲ್ಲೆಯ ಆಳಂದ ತಾಲೂಕಿನ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಈ ಬಗ್ಗೆ ಕಲಬುರಗಿ ಹೈಕೋರ್ಟ್ ಪೀಠ ಆದೇಶ ಹೊರಡಿಸಿದ್ದು, ಮಾರ್ಚ್ 8 ಶಿವರಾತ್ರಿಯ ದಿನ ಮಧ್ಯಾಹ್ನದ ನಂತರ ಪೂಜೆಗೆ 15 ಜನ ಹಿಂದೂಗಳಿಗೆ ಕಲಬುರಗಿ ಹೈಕೋರ್ಟ್ ಪೀಠ ಅವಕಾಶ ನೀಡಿದೆ. ಹಾಗೂ ಪೂಜೆ ಸಲ್ಲಿಸುವವರ 15 ಜನರ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿದೆ. ಇಲ್ಲದಿದ್ರೆ ಅನುಮತಿ ನೀಡಲಾಗುವುದಿಲ್ಲ ಸೂಚನೆ ನೀಡಿದೆ. ಅಲ್ಲದೇ ಮುಸ್ಲಿಂ ಸಮುದಾಯದ 15 ಜನರಿಗೂ ಪ್ರಾರ್ಥನೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ.
ಕಳೆದ ವರ್ಷ ಕೂಡ ಕೋರ್ಟ್ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು. ಈ ವರ್ಷವೂ ಕೂಡ ಕೋರ್ಟ್ ಅನುಮತಿ ನೀಡಿದೆ.