alex Certify BREAKING: ಕೃಷಿ ಖಾತೆ ಬಯಸಿದ್ದ ಹೆಚ್.ಡಿ. ಕುಮಾರಸ್ವಾಮಿಗೆ ಶಾಕ್: ಶಿವರಾಜ್ ಸಿಂಗ್ ಚೌಹಾಣ್ ಗೆ ಕೃಷಿ ಖಾತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕೃಷಿ ಖಾತೆ ಬಯಸಿದ್ದ ಹೆಚ್.ಡಿ. ಕುಮಾರಸ್ವಾಮಿಗೆ ಶಾಕ್: ಶಿವರಾಜ್ ಸಿಂಗ್ ಚೌಹಾಣ್ ಗೆ ಕೃಷಿ ಖಾತೆ

ನವದೆಹಲಿ: ಕೇಂದ್ರ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ.

ಕರ್ನಾಟಕದ ಮಾಜಿ ಸಿಎಂ, ನೂತನ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೃಷಿ ಖಾತೆ ಮೇಲೆ ಆಸಕ್ತಿ ತೋರಿಸಿದ್ದರು. ಆದರೆ, ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಖಾತೆ ನೀಡಲಾಗಿದೆ.

ನಿತಿನ್ ಗಡ್ಕರಿಗೆ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ ನೀಡಲಾಗಿದೆ. ಅಜಯ್ ತಮ್ತಾ ಮತ್ತು ಹರ್ಷ್ ಮಲ್ಹೋತ್ರಾ ಅವರು ಈ ಸಚಿವಾಲಯದ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದಾರೆ.

ನೂತನ ಸಚಿವರ ಖಾತೆ

ನಿತಿನ್ ಗಡ್ಕರಿ – ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ

ಅಮಿತ್ ಶಾ -ಗೃಹ ಇಲಾಖೆ

ಎಸ್. ಜಯಶಂಕರ್ -ವಿದೇಶಾಂಗ ಇಲಾಖೆ

ರಾಜನಾಥ್ ಸಿಂಗ್ -ರಕ್ಷಣಾ ಇಲಾಖೆ

ನಿರ್ಮಲಾ ಸೀತಾರಾಮನ್ -ಹಣಕಾಸು

ಮನೋಹರ್ ಲಾಲ್ ಖಟ್ಟರ್ – ಇಂಧನ, ನಗರಾಭಿವೃದ್ಧಿ,

ಶ್ರೀಪಾದ ನಾಯ್ಕ್ –ಇಂಧನ ಖಾತೆ ರಾಜ್ಯ ಸಚಿವ

ಶಿವರಾಜ್ ಸಿಂಗ್ ಚೌಹಾಣ್- ಕೃಷಿ ಇಲಾಖೆ

ಶೋಭಾ ಕರಂದ್ಲಾಜೆ-ಸಣ್ಣ ಮತ್ತು ಮಧ್ಯಮ ಕೈಗಾರಿಕೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...