ನವದೆಹಲಿ: ಕೇಂದ್ರ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ.
ನಿತಿನ್ ಗಡ್ಕರಿಗೆ ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ ನೀಡಲಾಗಿದೆ. ಈ ಮೂಲಕ ಸತತ ಮೂರನೇ ಅವಧಿಗೆ ನಿತಿನ್ ಗಡ್ಕರಿ ಹೆದ್ದಾರಿ ಖಾತೆ ನಿರ್ವಹಿಸಲಿದ್ದಾರೆ. ಉತ್ತರಾಖಂಡದ ಅಜಯ್ ತಮ್ತಾ ಮತ್ತು ದೆಹಲಿಯ ಹರ್ಷ್ ಮಲ್ಹೋತ್ರಾ ಅವರು ಸಚಿವಾಲಯದ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದಾರೆ.
ನಿತಿನ್ ಗಡ್ಕರಿ ಅವರು ಕಳೆದ ದಶಕದಲ್ಲಿ ಅವರು 90,000 ಕಿ.ಮೀ.ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳು ಮತ್ತು 30,000 ಕಿ.ಮೀ ಹೊಸ ರಸ್ತೆಗಳ ನಿರ್ಮಾಣದ ಮೇಲ್ವಿಚಾರಣೆಯನ್ನು ವಹಿಸಿದ್ದಾರೆ, ದೇಶದ ಸಾರಿಗೆ ಜಾಲವನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ.
ನೂತನ ಸಚಿವರ ಖಾತೆ
ನಿತಿನ್ ಗಡ್ಕರಿ – ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ
ಅಮಿತ್ ಶಾ -ಗೃಹ ಇಲಾಖೆ
ಎಸ್. ಜಯಶಂಕರ್ -ವಿದೇಶಾಂಗ ಇಲಾಖೆ
ರಾಜನಾಥ್ ಸಿಂಗ್ -ರಕ್ಷಣಾ ಇಲಾಖೆ
ನಿರ್ಮಲಾ ಸೀತಾರಾಮನ್ -ಹಣಕಾಸು
ಮನೋಹರ್ ಲಾಲ್ ಖಟ್ಟರ್ – ಇಂಧನ, ನಗರಾಭಿವೃದ್ಧಿ,
ಶ್ರೀಪಾದ ನಾಯ್ಕ್ –ಇಂಧನ ಖಾತೆ ರಾಜ್ಯ ಸಚಿವ
ಶಿವರಾಜ್ ಸಿಂಗ್ ಚೌಹಾಣ್- ಕೃಷಿ ಇಲಾಖೆ
ಶೋಭಾ ಕರಂದ್ಲಾಜೆ-ಸಣ್ಣ ಮತ್ತು ಮಧ್ಯಮ ಕೈಗಾರಿಕೆ(ರಾಜ್ಯ ಖಾತೆ)
ಚಿರಾಗ್ ಪಾಸ್ವಾನ್ –ಯುವಜನ ಸೇವೆ, ಕ್ರೀಡಾ ಖಾತೆ
ಹೆಚ್.ಡಿ. ಕುಮಾರಸ್ವಾಮಿ- ಉಕ್ಕು, ಬೃಹತ್ ಕೈಗಾರಿಕೆ
ಧರ್ಮೇಂದ್ರ ಪ್ರಧಾನ್ – ಮಾನವ ಸಂಪನ್ಮೂಲ
ಪಿಯೂಷ್ ಗೋಯಲ್ -ವಾಣಿಜ್ಯ
ರಾಮಮೋಹನ ನಾಯ್ಡು – ನಾಗರೀಕ ವಿಮಾನಯಾನ
ಕಿರಣ್ ರಿಜಿಜು -ಸಂಸದೀಯ ವ್ಯವಹಾರಗಳ ಇಲಾಖೆ