ಅಲೆಯನ್ಸ್ ಏರ್ ವಿಮಾನಯಾನ ಸಂಸ್ಥೆಗೆ ಸೇರಿದ 70 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಇಂಜಿನ್ ಕವರ್ ಇಲ್ಲದೆ ಇಂದು ಬೆಳಗ್ಗೆ ಮುಂಬೈನಿಂದ ಗುಜರಾತ್ಗೆ ಟೇಕ್ ಆಫ್ ಆಗಿದೆ ಎಂದು ವರದಿಯಾಗಿದೆ. ವಿವರಗಳ ಪ್ರಕಾರ, ವಿಮಾನವು ಟೇಕಾಫ್ ಮಾಡಲು ತಯಾರಿ ನಡೆಸುತ್ತಿದ್ದಾಗ ವಿಮಾನ ನಿಲ್ದಾಣದ ರನ್ವೇ ಮೇಲೆ ಕೌಲ್ ಬಿದ್ದಿದೆ ಎಂದು ತಿಳಿದುಬಂದಿದೆ.
ಭುಜ್ ವಿಮಾನ ನಿಲ್ದಾಣದಲ್ಲಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರೂ, ಇಂಜಿನ್ ಕವರ್ ಮಾಡಿಕೊಳ್ಳದೆ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಿಜಿಸಿಎಯು ವಿಮಾನಯಾನ ಸಂಸ್ಥೆಯ ವಿರುದ್ಧ ತನಿಖೆಗೆ ಆದೇಶಿಸಿದೆ.
ವಿಮಾನದಲ್ಲಿದ್ದ 70 ಜನರಲ್ಲಿ ನಾಲ್ವರು ಸಿಬ್ಬಂದಿ ಮತ್ತು ಒಬ್ಬ ವಿಮಾನ ನಿರ್ವಹಣಾ ಎಂಜಿನಿಯರ್ ಸೇರಿದ್ದಾರೆ. ವಿಮಾನ ಟೇಕಾಫ್ ಆದ ಕೂಡಲೇ ಮುಂಬೈ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಈ ವಿಷಯವನ್ನು ವರದಿ ಮಾಡಿದೆ. ಘಟನೆಯ ಬಗ್ಗೆ ಮಾತನಾಡಿರುವ ಮುಂಬೈ ವಿಮಾನ ನಿಲ್ದಾಣವು ಅಲೆಯನ್ಸ್ ಏರ್ ಮುಂಬೈನಿಂದ ಭುಜ್ಗೆ ಹಾರಲು ನಿರ್ಧರಿಸಲಾಗಿತ್ತು, ಆದರೆ ವಿಮಾನದ ಇಂಜಿನ್ ಕೌಲ್ ರನ್ವೇ ಮೇಲೆ ಬಿದ್ದು ಎಂಜಿನ್ ಕವರ್ ಇಲ್ಲದೆ ಟೇಕಾಫ್ ಆಗಿದೆ ಎಂದು ಹೇಳಿದರು.
YSV ದತ್ತ ಪಕ್ಷ ಬಿಡುವ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿದ್ದೇನು ಗೊತ್ತಾ…?
ವಿಮಾನದ (ATR72-600 ವಿಮಾನ VT RKJ, ಆಪರೇಟಿಂಗ್ ಫ್ಲೈಟ್ 9I-625) ಇಂಜಿನ್ ಗೆ ಮುಚ್ಚಲಾಗಿದ್ದ ಕವರ್ ಅಥವಾ ಕೌಲಿಂಗ್ ಟೇಕಾಫ್ ಆಗುತ್ತಿದ್ದಂತೆ ಗಾಳಿಗೆ ಕೆಳಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಆದರೂ ಕೂಡ ಇದು ಹೇಗೆ ಸಂಭವಿಸಿತು ಎನ್ನುವುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ವಿಮಾನ ಟೇಕಾಫ್ ಆಗುವಾಗ ಮತ್ತು ಇಳಿಯುವಾಗ ದಾಖಲಾಗಿರುವ ವಾಯ್ಸ್ ರೆಕಾರ್ಡರ್ ಪರಿಶೀಲಿಸಲು ಮುಂದಾಗಿದೆ.
ಎಂಜಿನ್ ಕೌಲಿಂಗ್ (ಕವರ್) ನಷ್ಟವು ಗಮ್ಯಸ್ಥಾನಕ್ಕೆ ಹಾರಾಟವನ್ನು ಮುಂದುವರೆಸಿದ ವಿಮಾನದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಡಿಜಿಸಿಎ ಯ ಮೂಲಗಳು ತಿಳಿಸಿವೆ. ಮುಂಬೈನಿಂದ ಹೊರಟ ವಿಮಾನ ಗುಜರಾತಿನಲ್ಲಿ ಯಾವುದೇ ಅಪಾಯವಿಲ್ಲದೆ ಇಳಿದಿದೆ. ಆದರೆ ಮಾರ್ಗಮಧ್ಯೆ ಹೆಚ್ಚು ಕಡಿಮೆಯಾಗಿದ್ದರೆ ಸಾವು-ನೋವು ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.