ಬಳ್ಳಾರಿ: ಕೆ ಎಸ್ ಆರ್ ಟಿ ಸಿ ಬಸ್ ಡಿಪೋದಲ್ಲಿ ದುರಂತವೊಂದು ಸಂಭವಿಸಿದೆ. ಬಸ್ ರಿಪೇರಿ ಮಾಡುತ್ತಿದ್ದ ವೇಳೆ ತುಂಡಾದ ರಾಡ್ ಮೆಕಾನಿಕ್ ಗಂಟಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಕೆ ಎಸ್ ಆರ್ ಟಿ ಸಿ ಮೆಕಾನಿಕ್ ಬಾದಾನಿಹಟ್ಟಿ ನಿವಾಸಿ ಟಿ.ಮಂಜುನಾಥ್ ಮೃತ ಮೆಕಾನಿಕ್. ಕೆ ಎಸ್ ಆರ್ ಟಿ ಸಿ ಬಸ್ ಕೆಳಗೆ ತುಂಡಾಗಿದ್ದ ಬುಷ್ ರಾಡ್ ಸರಿಮಾಡುತ್ತಿದ್ದ ವೇಳೆ ರಾಡ್ ತುಂಡಾಗಿ ಮೆಕಾನಿಕ್ ಗಂಟಲಿಗೆ ಚುಚ್ಚಿದೆ, ಸ್ಥಳದಲ್ಲೇ ಮೆಕಾನಿಕ್ ಮೃತಪಟ್ಟಿದ್ದಾರೆ.
ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಪೋ ನಿರ್ಲಕ್ಷವೇ ಮೆಕಾನಿಕ್ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.