ಬೆಳಗಾವಿ : ಗುತ್ತಿಗೆದಾರನ ಕಿರುಕುಳಕ್ಕೆ ಬೇಸತ್ತು ಬೆಳಗಾವಿ ಪಾಲಿಕೆಯ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೃತರನ್ನು ಶಶಿಕಾಂತ ಢವಳೆ(26) ಎಂದು ಗುರುತಿಸಲಾಗಿದೆ. ಶಶಿಕಾಂತ ಢವಳೆ ಗುತ್ತಿಗೆದಾರ ಎನ್.ಡಿ ಪಾಟೀಲ್ ಎಂಬುವವರ ಬಳಿ 80ಸಾವಿರ ಸಾಲ ಪಡೆದಿದ್ದು, 50 ಸಾವಿರ ವಾಪಸ್ ನೀಡಿದ್ದರು. ಉಳಿದ 30 ಸಾವಿರ ಶೀಘ್ರದಲ್ಲೇ ಕೊಡುವುದಾಗಿ ಹೇಳಿದ್ದರು.
ಉಳಿದ ಹಣ ವಾಪಸ್ ಕೊಡುವಂತೆ ಪಾಟೀಲ್ ಕಿರುಕುಳ ನೀಡಿದ್ದು, ಇದರಿಂದ ಮನನೊಂದು ಶಶಿಕಾಂತ ಢವಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.