ಅಲಹಾಬಾದ್: ಪರಿಸರ ಸ್ನೇಹಿ ದೀಪಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುಂದರವಾದ ಮರಳು ಕಲೆಯನ್ನು ರಚಿಸಿದ್ದಾರೆ. ಇದೀಗ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಪುರಾತನ ಸಂಪ್ರದಾಯವನ್ನು ಬಿಂಬಿಸುವ ರಂಗೋಲಿಗಳು ಮತ್ತು ದೀಪಗಳನ್ನು ಈ ಮರಳು ಕಲೆಯಲ್ಲಿ ರಚಿಸಲಾಗಿದೆ. ಹಸಿರು ಕ್ರ್ಯಾಕರ್‌ಗಳಂತಹ ಕಡಿಮೆ ಮಾಲಿನ್ಯಕಾರಕ ಕ್ರ್ಯಾಕರ್‌ಗಳ ಬಳಕೆ ಮಾಡಬೇಕೆಂಬುದು ಕಲಾವಿದರ ಅಂಬೋಣ.
ಬೆಳಕಿನ ಹಬ್ಬವೇ ದೀಪಾವಳಿ. ದೀಪಾವಳಿಯನ್ನು ಮಾಲಿನ್ಯ ಹರಡುವ ಪಟಾಕಿಗಳ ಬದಲು ದೀಪಗಳನ್ನು ಬೆಳಗಿಸುವುದರ ಮುಖಾಂತರ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಹೀಗಾಗಿ ಮರಳು ಕಲೆಯ ಮುಖಾಂತರ ಈ ಸಂದೇಶ ಸಾರುತ್ತಿದ್ದೇವೆ ಎಂದು ವಿದ್ಯಾರ್ಥಿ ಕಲಾವಿದರು ಹೇಳಿದ್ದಾರೆ.