ರಸ್ತೆ ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ರಾಷ್ಟ್ರೀಯ ವಿಮಾ ಕಂಪನಿಗೆ 33 ಲಕ್ಷ 50 ಸಾವಿರ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡುವಂತೆ ಆದೇಶಿಸಿದೆ. ತೀರ್ಪು ನೀಡುತ್ತಾ ಈ ವಿಚಾರವನ್ನು ತಿಳಿಸಿದ ಅಲಹಾಬಾದ್ ಹೈಕೋರ್ಟ್, ಪುತ್ರನ ಸಾವಿನ ವಾರ್ತೆಯು ಯಾವುದೇ ಪೋಷಕರು ಹಾಗೂ ಕುಟುಂಬಸ್ಥರಿಗೆ ದೊಡ್ಡ ಆಘಾತಕ್ಕಿಂತ ಕಡಿಮೆಯೇನಲ್ಲ. ಅಲ್ಲದೇ ಅಜಾಗರೂಕ ಚಾಲನೆಯನ್ನು ಪ್ರತಿ ಬಾರಿಯೂ ವೇಗದೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಹೇಳಿದೆ.
ದೇಶದಲ್ಲಿ ಪ್ರತಿನಿತ್ಯ ಯಾರಾದರೊಬ್ಬರಾದರೂ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹದ್ದೇ ಒಂದು ಘಟನೆಯು 2004ರ ಜುಲೈ 20ರಂದು ಅಭಿಷೇಕ್ ಎಂಬವರ ಜೊತೆ ಸಂಭವಿಸಿತ್ತು. ದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಭಿಷೇಕ್ ಸಾವನ್ನಪ್ಪಿದ್ದರು.ಪೋಷಕರು ಬದುಕಿದ್ದಾಗಲೇ ಪುತ್ರ ಸಾವನ್ನಪ್ಪಿರುವುದರಿಂದ ಪೋಷಕರಿಗೆ ಎಷ್ಟು ದೊಡ್ಡ ಮಟ್ಟದ ಆಘಾತ ಸಂಭವಿಸಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ತಾಯಿ ಮೊದಲು ತನ್ನ ಪುತ್ರನನ್ನು ಕಳೆದುಕೊಂಡಿದ್ದಾರೆ. ಬಳಿಕ ತನ್ನ ಪತಿಯನ್ನೂ ಕಳೆದುಕೊಂಡಿದ್ದಾರೆ. ಇದಾದ ಬಳಿಕ ಆ ಮಹಿಳೆ ಜೀವನವನ್ನು ಹೇಗೆ ನಡೆಸಿದರು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.
ನ್ಯಾಯಾಲಯದ ನಿರ್ದೇಶನದ ಬಳಿಕ ವಿಮಾ ಕಂಪನಿಯು ಟ್ರಕ್ನ ವೇಗ ಹೆಚ್ಚಾಗಿತ್ತು ಎಂದು ವಾದಿಸಿದೆ. ಟ್ರಕ್ ಗಂಟೆಗೆ 50 ಕಿಮೀ ವೇಗದಲ್ಲಿ ಸಂಚರಿಸಿತ್ತು ಎಂದು ಹೇಳಿದೆ. ಆದರೆ ವಿಮಾ ಕಂಪನಿಯ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯವು ಟ್ರಕ್ ಹೆಚ್ಚಿನ ವೇಗವನ್ನು ಹೊಂದಿರಲಿಲ್ಲ. ಹಾಗೂ ಅಜಾಗರೂಕ ಚಾಲನೆಯನ್ನು ಯಾವಾಗಲೂ ವೇಗದೊಂದಿಗೆ ಸಂಪರ್ಕಿಸುವುದು ಸರಿಯಲ್ಲ ಎಂದು ಹೇಳಿದೆ.
ವಿಮಾ ಕಂಪನಿಯು ನೀಡಬೇಕಾದ ವಿಮಾ ಪರಿಹಾರವನ್ನು ಶೇಕಡಾ 8ರಷ್ಟು ಹೆಚ್ಚಿಸುವಂತೆ ಹೇಳಿದೆ. ಟ್ರಕ್ ಚಾಲಕ ಅಜಾಗರೂಕ ಚಾಲನೆ ಮಾಡಿದ್ದರೂ ಸಹ ಆತ ವಿಮೆಯನ್ನು ಮಾಡಿಸಿದ್ದಾನೆ. ಹೀಗಾಗಿ ವಿಮಾ ಕಂಪನಿಯು ಸಂಬಂಧಪಟ್ಟವರಿಗೆ ಸೂಕ್ತ ಪರಿಹಾರವನ್ನು ನೀಡಲೇಬೇಕು. 2 ಲಕ್ಷದ 30 ಸಾವಿರದ 400 ರೂಪಾಯಿಗೆ ಶೇಕಡಾ 8ರಷ್ಟು ಬಡ್ಡಿ ಸಮೇತ ನೀಡುವಂತೆ ಆದೇಶ ನೀಡಿದೆ.