ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ರಕ್ಷಿಸುವ ಕಾನೂನು ಇದೆ ಎಂದು ನಿಮಗೆ ತಿಳಿದಿದೆಯೇ ? ಭಾರತೀಯ ರೈಲ್ವೆಯು ಒಂಟಿ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವ ಕಾನೂನನ್ನು 1989ರಲ್ಲಿ ರೂಪಿಸಿದೆ.
ಬಹಳಷ್ಟು ಜನರಿಗೆ ಇದರ ಅರಿವು ಇಲ್ಲ. ಹೀಗಾಗಿ ಇದರ ಸಂಕ್ಷಿಪ್ತ ಅರಿವು ನೀಡುವ ಪ್ರಯತ್ನ ಇಲ್ಲಿದೆ.
ಉದಾಹರಣೆಗೆ, ಭಾರತೀಯ ರೈಲ್ವೇ ಕಾಯಿದೆ 1989ರ ಸೆಕ್ಷನ್ 139ರ ಪ್ರಕಾರ, ಒಬ್ಬ ಮಹಿಳೆಯು ಪುರುಷ ಪ್ರಯಾಣಿಕರಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಆಕೆ ತನ್ನ ಮಗುವಿನೊಂದಿಗೆ ಇದ್ದರೆ, ಆಕೆಯ ಬಳಿ ರೈಲು ಪಾಸ್ ಅಥವಾ ಟಿಕೆಟ್ ಇಲ್ಲದೆ ಇದ್ದರೂ ರಾತ್ರಿ ವೇಳೆ ರೈಲಿನಿಂದ ಇಳಿಯುವಂತೆ ಆದೇಶಿಸಲಾಗುವುದಿಲ್ಲ. ಬೋಗಿಯಿಂದ ಮಹಿಳೆಯನ್ನು ಹೊರಹೋಗಲು ಹೇಳಬೇಕಾದಾಗಲೂ ಅಧಿಕಾರಿಗಳೊಂದಿಗೆ ಮಹಿಳಾ ಕಾನ್‌ಸ್ಟೆಬಲ್ ಇರಬೇಕಾದ್ದು ಅಗತ್ಯ.
ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 311 ರ ಪ್ರಕಾರ, ಮಹಿಳೆಯರಿಗೆ ಮೀಸಲಾದ ಬೋಗಿಗಳಿಗೆ ಮಿಲಿಟರಿ ಸಿಬ್ಬಂದಿ ಪ್ರವೇಶಿಸಿದರೆ, ಅಂತಹ ಬೋಗಿಗಳಿಗೆ ಪ್ರವೇಶಿಸದಂತೆ ಅವರನ್ನು ನಯವಾಗಿ ತಡೆಯಬೇಕು. ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವಂತೆ ಸೇನಾ ಸಿಬ್ಬಂದಿಗೆ ಸಲಹೆ ನೀಡಬೇಕು.
ಹಿಂಸೆಗೆ ತಿರುಗಿದ ಜಿಲ್ಲೆ ನಾಮಕರಣ ವಿವಾದ: ಆಂಧ್ರಪ್ರದೇಶ ಸಚಿವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ
ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 162 ರ ಪ್ರಕಾರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನಿಗೆ ಮಾತ್ರ ಮಹಿಳೆಯರಿಗೆ ಮೀಸಲಾದ ಬೋಗಿಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ. ಮಹಿಳಾ ಬೋಗಿಗಳಿಗೆ ಪ್ರವೇಶಿಸುವ ಪುರುಷ ಪ್ರಯಾಣಿಕರನ್ನು ಕಾನೂನಿನ ಮೂಲಕ ವಿಚಾರಣೆಗೆ ಒಳಪಡಿಸಬಹುದು.
ಈ ವಿಭಾಗಗಳಲ್ಲದೆ, ಮಹಿಳೆಯರಿಗೆ 24X7 ಭದ್ರತೆ ಒದಗಿಸಲು ಸಿಸಿಟಿವಿ ಮತ್ತು ನಿಗಾ ಕೊಠಡಿಗಳನ್ನು ಅಳವಡಿಸಲಾಗುತ್ತಿದೆ.
ಇದಲ್ಲದೆ, ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ರೈಲ್ವೆ ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ, ಜೈಪುರದ ಗಾಂಧಿ ನಗರ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ನಿರ್ವಹಿಸುತ್ತಾರೆ. ಈ ರೈಲು ನಿಲ್ದಾಣವನ್ನು 28 ಮಹಿಳಾ ಉದ್ಯೋಗಿಗಳು ನಿರ್ವಹಿಸುತ್ತಿದ್ದಾರೆ. ಅದೇ ರೀತಿ, ಮುಂಬೈನ ಮಾತುಂಗಾ ರೈಲು ನಿಲ್ದಾಣವು ಸಂಪೂರ್ಣವಾಗಿ ಮಹಿಳಾ ಉದ್ಯೋಗಿಗಳಿಂದ ನಿರ್ವಹಿಸಲ್ಪಡುತ್ತದೆ.