
ಪ್ರತಿ ಕುಟುಂಬಕ್ಕೆ ಅಥವಾ ವ್ಯಕ್ತಿಗೆ ವಾರ್ಷಿಕ 5 ಲಕ್ಷ ರೂ. ಉಚಿತ ಆರೋಗ್ಯ ರಕ್ಷಣೆಯನ್ನು ನೀಡುವ ಯೋಜನೆಯು ಇದಾಗಿದೆ. ವ್ಯಕ್ತಿ/ಕುಟುಂಬದ ಆರೋಗ್ಯ ವೆಚ್ಚದ ಸುಮಾರು 70% ವೆಚ್ಚಗಳನ್ನು ಕಡಿಮೆ ಮಾಡಲಾಗುತ್ತದೆ.
2011 ರ ಜನಗಣತಿಯ ಪ್ರಕಾರ ಆಗಿನ 1.23 ಶತಕೋಟಿಯಲ್ಲಿ 8.6% ಅಥವಾ 103 ಮಿಲಿಯನ್ ಜನರು 60 ವರ್ಷಕ್ಕಿಂತ ಹೆಚ್ಚಿದ್ದರು . ಈ ಸಂಖ್ಯೆಯು 2050 ರ ವೇಳೆಗೆ 19.5% ಅಥವಾ 319 ಮಿಲಿಯನ್ ಆಗಲಿದೆ. ಆದರೂ 70 ವರ್ಷಕ್ಕಿಂತ ಹೆಚ್ಚಿನ ನಾಗರಿಕರ ಸಂಖ್ಯೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ . ಖಾಸಗಿ ಅಂದಾಜಿನ ಪ್ರಕಾರ ಅವರು ಸುಮಾರು 55 ಮಿಲಿಯನ್ ಅಥವಾ ಸುಮಾರು 45 ಮಿಲಿಯನ್ ಕುಟುಂಬಗಳನ್ನು ಹೊಂದಿದ್ದಾರೆ. ನೀತಿ ಆಯೋಗ ಪ್ರಕಾರ ಈ ವೃದ್ಧರಲ್ಲಿ 58% ರಷ್ಟು ಮಹಿಳೆಯರಿದ್ದು ಇದರಲ್ಲಿ 54% ರಷ್ಟು ವಿಧವೆಯರು ಕೂಡ ಇದ್ದಾರೆ.
ಸರ್ಕಾರದ ಮಾಹಿತಿಯ ಪ್ರಕಾರ ಈ ವಿಸ್ತರಣೆಯಿಂದಾಗಿ ಸುಮಾರು 20 ಮಿಲಿಯನ್ ಕುಟುಂಬಗಳು ಮತ್ತು 30 ಮಿಲಿಯನ್ ವ್ಯಕ್ತಿಗಳನ್ನು ಯೋಜನೆಗೆ ಸೇರಿಸಲಾಗುತ್ತದೆ. 60 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗಾಗಲೇ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಇದು ರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿಗಳ ಜೇಬಿನಿಂದ ಕೊಡುವ ಸುಮಾರು 1 ಲಕ್ಷ ಕೋಟಿ ರೂಪಾಯಿಯಷ್ಟು ವೆಚ್ಚವನ್ನು ಕಡಿಮೆ ಮಾಡಿದೆ.
ದೇಶದಲ್ಲಿ 400 ಮಿಲಿಯನ್ ಬಡತನವಿಲ್ಲದ ನಾಗರಿಕರಿದ್ದಾರೆ. ರಾಷ್ಟ್ರವ್ಯಾಪಿ ಯೋಜನೆಯನ್ನು ಜಾರಿಗೆ ತರುವ ಮುನ್ನ ಆಯ್ದ ಸ್ಥಳಗಳಲ್ಲಿ ಹಂತಗಳಲ್ಲಿ ಒಂದು ವಾರದೊಳಗೆ ನೋಂದಣಿ ಪ್ರಾರಂಭವಾಗುತ್ತದೆ ಎಂದು ಸಚಿವ ಸಂಪುಟ ಹೇಳಿದೆ ಹೇಳಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ಯೋಜನೆಯ ವಿಸ್ತರಣೆಯು ಸುಮಾರು 45 ಮಿಲಿಯನ್ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಫಲಾನುಭವಿಗಳು ಯಾರಾಗುತ್ತಾರೆ?
AB-PMJAY ಅಡಿಯಲ್ಲಿ ಈಗಾಗಲೇ ಇರುವವರು ಸೇರಿದಂತೆ 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಅರ್ಹರಾಗಿದ್ದಾರೆ . ಅವರು ಆಯುಷ್ಮಾನ್ ಮೊಬೈಲ್ ಅಪ್ಲಿಕೇಶನ್ ಅಥವಾ PMJAY ಪೋರ್ಟಲ್ ಮೂಲಕ ಯೋಜನೆಗೆ ಸೇರಬೇಕಷ್ಟೇ. ನೋಂದಾಯಿಸಿಕೊಳ್ಳುವ ಒಂದು ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವಿಮಾ ಮೊತ್ತವು ಸಿಗಲಿದೆ. ಆದರೆ ಒಂದು ಕುಟುಂಬದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಅಥವಾ ಹೆಚ್ಚಿನ ಸದಸ್ಯರಿದ್ದರೆ, ವಿಮಾ ಮೊತ್ತವನ್ನು ಅವರ ನಡುವೆ ಹಂಚಲಾಗುತ್ತದೆ. ವಯಸ್ಸು ಪರಿಶೀಲನೆ ಮತ್ತು ಇತರ ವಿವರಗಳಿಗಾಗಿ ಆಧಾರ್ ಕಾರ್ಡ್ ಅಗತ್ಯವಿದೆ.
ಖಾಸಗಿ ವಿಮೆ ಮತ್ತು ESIC ಫಲಾನುಭವಿಗಳನ್ನು ಹೊಂದಿರುವವರು ಸಹ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಈಗಾಗಲೇ ಈ ಯೋಜನೆಯಡಿ ಒಳಗೊಂಡಿರುವ ಕುಟುಂಬಗಳು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಬಳಸಲು 5 ಲಕ್ಷದ ಟಾಪ್-ಅಪ್ ಕವರ್ ಅನ್ನು ಪಡೆಯುತ್ತವೆ.
ಬಹುದೊಡ್ಡ ವ್ಯಾಪ್ತಿ
ಒಟ್ಟು 1.44 ಶತಕೋಟಿ ಜನಸಂಖ್ಯೆಯಲ್ಲಿ ಸುಮಾರು 53 ಮಿಲಿಯನ್ ಜನರು 70 ವರ್ಷಕ್ಕಿಂತ ಹೆಚ್ಚು ಅಥವಾ ಸುಮಾರು 45 ಮಿಲಿಯನ್ ಕುಟುಂಬಗಳು ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ 17.8 ಮಿಲಿಯನ್ ಕುಟುಂಬಗಳು ಈಗಾಗಲೇ ಯೋಜನೆಯ ರಕ್ಷಣೆ ಪಡೆದಿವೆ. ಈ ಘೋಷಣೆಯಿಂದಾಗಿ ಸುಮಾರು 20 ಮಿಲಿಯನ್ ಕುಟುಂಬಗಳು ಮತ್ತು 30 ಮಿಲಿಯನ್ ವ್ಯಕ್ತಿಗಳನ್ನು ಯೋಜನೆಗೆ ಸೇರಿಸಲಾಗುವುದು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 58% ಮಹಿಳೆಯರು ಅದರಲ್ಲಿ 54% ವಿಧವಾ ಮಹಿಳೆಯರಿಗೆ ಮತ್ತಷ್ಟು ಸಹಾಯ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ, AB-PMJAY ವಯಸ್ಸಾದವರಿಗೆ ಸುಮಾರು 25 ಆರೋಗ್ಯ ಪ್ಯಾಕೇಜ್‌ಗಳನ್ನು ಒಳಗೊಂಡಿದೆ.
ಇದು ಸಂಪೂರ್ಣ ಉಚಿತವೇ?
ಆಸಕ್ತ ವ್ಯಕ್ತಿಯು ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ ಮತ್ತು ಆದ್ದರಿಂದ ಇದು ಸಂಪೂರ್ಣವಾಗಿ ಉಚಿತವಲ್ಲ. ಯೋಜನೆಯ ವಾರ್ಷಿಕ ಪ್ರೀಮಿಯಂ 1,102 ರೂ. ಆಗಿದೆ. ಫಲಾನುಭವಿ ಆಡಳಿತಾತ್ಮಕ ಶುಲ್ಕಕ್ಕಾಗಿ 50 ರೂ. ಪಾವತಿಸಬೇಕು. ಇದರಲ್ಲಿ ಕೇಂದ್ರವು 60% ಮತ್ತು ಉಳಿದ 40% ಆಯಾ ರಾಜ್ಯ ಹಣವನ್ನು ನೀಡುತ್ತದೆ.