alex Certify ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ ಬಗ್ಗೆ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ ಬಗ್ಗೆ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ..!

ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) ಎನ್ನುವುದು ಸಾಮಾನ್ಯ ಭಾಷೆಯಲ್ಲಿ ವಿವರಿಸುವುದಾದರೆ ಪಿಎಫ್ ಸದಸ್ಯರು ಪಡೆಯುವ ಜೀವ ವಿಮಾ ಸೌಲಭ್ಯ.‌ ಇದು ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, ಇಪಿಎಫ್ ಮತ್ತು ಎಂಪಿ ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ವಿನಾಯಿತಿ ಪಡೆದಿರುವ ಪಿಎಫ್ ಯೋಜನೆಗಳ ಸದಸ್ಯರಾಗಿರುವ ಎಲ್ಲಾ ಉದ್ಯೋಗಿಗಳಿಗೆ ಜೀವ ವಿಮಾ ಪ್ರಯೋಜನಗಳನ್ನು ಒದಗಿಸುವ ವಿಮಾ ಯೋಜನೆಯಾಗಿದೆ.

ತನ್ನ ಇತ್ತೀಚಿನ ಟ್ವೀಟ್‌ನಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) EDLI ಯೋಜನೆಯ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಟ್ವೀಟ್ ಮಾಡಿದೆ. ಈ ಮೂಲಕ ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ.‌

ಕೊರೋನಾ ಭಾರಿ ಇಳಿಕೆ ಹಿನ್ನಲೆ, ಕೇಂದ್ರದಿಂದ ಮಹತ್ವದ ಸೂಚನೆ; ಕೋವಿಡ್ ನಿರ್ಬಂಧ ತೆರವುಗೊಳಿಸಲು ರಾಜ್ಯಗಳಿಗೆ ಪತ್ರ

EDLI ಯೋಜನೆಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ

1. ನಿವೃತ್ತಿ ನಿಧಿ ಸಂಸ್ಥೆಯು ‘ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್’ (EDLI) ಯೋಜನೆಯಡಿಯಲ್ಲಿ ಗರಿಷ್ಠ ಭರವಸೆ ಪ್ರಯೋಜನವನ್ನು ಈ ವರ್ಷ ಜೂನ್‌ನಲ್ಲಿ 7 ಲಕ್ಷ ರೂ.ವರೆಗೆ ಹೆಚ್ಚಿಸಿದೆ. ಕವರ್ ಮೊತ್ತದ ಹೆಚ್ಚಳವನ್ನು 28 ಏಪ್ರಿಲ್ 2021 ರಂದು ಮಾಡಲಾಗಿದೆ. ಈ ಮೊದಲು ಈ ಮೊತ್ತ 6 ಲಕ್ಷ ರೂ. ಆಗಿತ್ತು.

2. ಎಲ್ಲಾ ಖಾತೆದಾರರಿಗೆ ಈ ಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಮುಖ್ಯ ಖಾತೆದಾರರು ನೈಸರ್ಗಿಕ ಕಾರಣ,‌ ಅಪಘಾತ ಅಥವಾ ಅನಾರೋಗ್ಯದಿಂದ ಮರಣ ಹೊಂದಿದರೆ, ನಾಮಿನಿಗೆ 7 ಲಕ್ಷ ರೂ. ದೊರೆಯಲಿದೆ.

3. ಮರಣ ಹೊಂದಿದ ಸದಸ್ಯರು ಮರಣದ ಮೊದಲು 12 ತಿಂಗಳವರೆಗೆ ನಿರಂತರ ಉದ್ಯೋಗದಲ್ಲಿದ್ದರೆ ರೂ. 2.5 ಲಕ್ಷದ ಕನಿಷ್ಠ ಪ್ರಯೋಜನ ಪಡೆಯುತ್ತಾರೆ

4. ಈ ಯೋಜನೆಗಾಗಿ 15 ಸಾವಿರಕ್ಕೂ ಹೆಚ್ಚು ವೇತನ ಪಡೆಯುವ ಉದ್ಯೋಗದಾತರ ಮಾಸಿಕ ವೇತನದಿಂದ ಕೇವಲ‌ 0.5% ಕಡಿತವಾಗಲಿದೆ.

5. ಇದರ ಮೇಲೆ ಉದ್ಯೋಗಿಯು ಯಾವುದೇ ಕೊಡುಗೆ ನೀಡಬೇಕಿಲ್ಲ.

6. EDLI ಯೋಜನೆಗೆ ಈಗಾಗ್ಲೇ PF ಸದಸ್ಯರಾಗಿರುವವರನ್ನ ಸ್ವಯಂ ನೋಂದಣಿ ಮಾಡಿಕೊಳ್ಳಲಾಗುತ್ತೆ.

7. ಲಾಭವನ್ನು ನೇರವಾಗಿ ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...