ಬಿರು ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ರಸ ಸಿಕ್ಕರೆ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಇದು ಬಹುತೇಕರ ನೆಚ್ಚಿನ ಪಾನೀಯ, ದೇಹವನ್ನು ತಂಪಾಗಿಡುತ್ತದೆ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಕಬ್ಬಿನ ರಸ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಗುಣಗಳಿಂದ ಸಮೃದ್ಧವಾಗಿದೆ. ಇದು ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ.
ಆದರೆ ಕಬ್ಬಿನ ರಸವನ್ನು ಅತಿಯಾಗಿ ಕುಡಿಯುವುದು ಅಪಾಯಕಾರಿ. ಮಧುಮೇಹ ಇರುವವರು ಇದನ್ನು ಸೇವಿಸಬಾರದು. ಕಬ್ಬಿನ ಜ್ಯೂಸ್ ಅನ್ನು ಅತಿಯಾಗಿ ಕುಡಿದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಜನರು ಶಾಖದಿಂದ ಪರಿಹಾರ ಪಡೆಯಲು ಕಬ್ಬಿನ ರಸವನ್ನು ಕುಡಿಯುತ್ತಾರೆ, ಆದರೆ ಇದು ತಲೆನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಅಷ್ಟೇ ಅಲ್ಲ ಕಬ್ಬಿನ ರಸವನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ವಾಯು, ಗ್ಯಾಸ್, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಉಂಟಾಗುತ್ತವೆ. ಕಬ್ಬಿನ ರಸ ಕುಡಿಯುವುದರಿಂದ ಚಿಕ್ಕ ಮಕ್ಕಳಿಗೆ ಶೀತವಾಗಬಹುದು.
ಕಬ್ಬಿನ ರಸದಲ್ಲಿ ಕ್ಯಾಲೋರಿಗಳ ಪ್ರಮಾಣವು ಕಡಿಮೆಯಿರುತ್ತದೆ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಕಬ್ಬಿನ ರಸದಲ್ಲಿ ಸಕ್ಕರೆಯ ಪ್ರಮಾಣವು ಅಧಿಕವಾಗಿರುತ್ತದೆ. ಇದು ಸ್ಥೂಲಕಾಯತೆಗೆ ಕಾರಣವಾಗಬಹುದು.
ಕೆಲವರಿಗೆ ಕಬ್ಬಿನ ಜ್ಯೂಸ್ ಕುಡಿದ ನಂತರ ಹಲ್ಲಿನ ಸಮಸ್ಯೆ ಕಾಡಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವುದರಿಂದ ಹಲ್ಲುಗಳು ಕೊಳೆಯಲು ಪ್ರಾರಂಭಿಸುತ್ತವೆ. ವಿಶೇಷವಾಗಿ ಮಕ್ಕಳು ಕಬ್ಬಿನ ರಸವನ್ನು ಅತಿಯಾಗಿ ಕುಡಿಯುವುದನ್ನು ತಪ್ಪಿಸಬೇಕು.
ಕಬ್ಬಿನ ರಸವನ್ನು ಹೆಚ್ಚು ಸೇವಿಸುವವರಿಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುತ್ತವೆ. ಹಾಗಾಗಿ ಕಬ್ಬಿನ ರಸವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಬೇಸಿಗೆಯಲ್ಲಿ ಮಜ್ಜಿಗೆ, ಮೊಸರು ಅಥವಾ ನಿಂಬೆ ಪಾನಕವನ್ನು ಕುಡಿಯಿರಿ.