ಇತ್ತೀಚಿನ ದಿನಗಳಲ್ಲಿ ಅಧಿಕ ಕೊಬ್ಬಿನ ಆಹಾರ ಸೇವನೆ ಹಾಗೂ ಮದ್ಯಪಾನದ ಅಭ್ಯಾಸ ವಿಪರೀತವಾಗಿಬಿಟ್ಟಿದೆ. ಇದರಿಂದಾಗಿ ಸ್ಥೂಲಕಾಯಿಗಳು, ಕೊಲೆಸ್ಟರಾಲ್ ಸಮಸ್ಯೆ ಇರುವವರು ಹಾಗೂ ಮಧುಮೇಹದ ಸಮಸ್ಯೆ ಇರುವವರು ತೀರಾ ಸಾಮಾನ್ಯವಾಗಿಬಿಟ್ಟಿದ್ದಾರೆ.
ಲಿವರ್ನಲ್ಲಿ ಕೊಬ್ಬು ಹೆಚ್ಚಾಗುವುದು ಎರಡು ವಿಧಗಳಿವೆ — ಆಲ್ಕೋಹಾಲ್ ಕಾರಣದಿಂದ ಹಾಗೂ ಅನ್ಯಕಾರಣಗಳಿಂದ, ಮೊದಲನೆಯದು ಆಲ್ಕೋಹಾಲ್ನ ಅತಿಯಾದ ಸೇವನೆಯಿಂದ ಆದರೆ ಮತ್ತೊಂದು ಸ್ಥೂಲಕಾಯ, ಮಧುಮೇಹ ಹಾಗೂ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಯ ಕಾರಣದಿಂದ ಆಗುತ್ತದೆ.
ನಿಮ್ಮ ಲಿವರ್ನಲ್ಲಿ ಕೊಬ್ಬಿನಂಶ ತೀರಾ ಹೆಚ್ಚಾಗಿದ್ದಲ್ಲಿ ನಿಮ್ಮ ಚರ್ಮದಲ್ಲಿ ಕಾಣಸಿಗುವ ಕೆಲವೊಂದು ಲಕ್ಷಣಗಳು ಒಳಗಾಗುತ್ತಿರುವ ಅನಾರೋಗ್ಯದ ಸೂಚನೆಗಳನ್ನುತೋರುತ್ತವೆ.
ಲಿವರ್ನ ಈ ಸಮಸ್ಯೆಯು ಫೆಬ್ರೋಸಿಸ್, ಕ್ಯಾನ್ಸರ್ ಅಥವಾ ಕಿರೋಸಿಸ್ನಂಥ ಮಾರಣಾಂತಿಕ ಘಟ್ಟ ತಲುಪಿದಾಗ ರಕ್ತನಾಳಗಳು ಜೇಡದ ಜಾಲದಂತೆ ಕಾಣಿಸಲು ಆರಂಭಿಸುತ್ತವೆ.
ಸ್ಪೈಡರ್ ಆಂಗಿಯೋಮಾ ಕಿರೋಸಿಸ್ ಎಂದು ಕರೆಯಲ್ಪಡುವ ಈ ಸಮಸ್ಯೆಯು ಲಿವರ್ನಲ್ಲಿ ಶೇಖರಣೆಯಾಗುವ ಕೊಬ್ಬಿನ ಕಣಗಳಿಂದಾಗಿ ರಕ್ತ ಪರಿಚಲನೆ ಅಸಮರ್ಪಕವಾದ ವೇಳೆ ಆಗುತ್ತದೆ. ಇದರಿಂದಾಗಿ ರಕ್ತದೊತ್ತಡದಲ್ಲಿ ಏರಿಕೆಯಾಗಿ ರಕ್ತನಾಳಗಳು ಊದಿಕೊಳ್ಳಲಾರಂಭಿಸುತ್ತವೆ. ನೋಡಲು ನಿರುಪದ್ರವಿಯಂತೆ ಕಂಡರೂ ಈ ಲಕ್ಷಣವು ದೇಹದ ಒಳಗೆ ಏನೋ ಗಂಭೀರವಾದ ಸಮಸ್ಯೆ ಇದೆ ಎಂದು ಸೂಚಿಸುತ್ತದೆ.
ಇಂಥ ಪರಿಸ್ಥಿತಿಯಲ್ಲಿ ದೇಹದ ತೂಕದಲ್ಲಿ 10% ಕಡಿಮೆ ಮಾಡಿಕೊಂಡಲ್ಲಿ, ಲಿವರ್ನಲ್ಲಿರುವ ಕೊಬ್ಬಿನಂಶ ಕರಗಿ ಈ ಸಮಸ್ಯೆ ಸರಿಹೋಗಲಾರಂಭಿಸುತ್ತದೆ. ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಂಡು, ಏರೋಬಿಕ್ಸ್ ಹಾಗೂ ಸ್ಟ್ರೆಂತ್ ತರಬೇತಿ ಮೂಲಕ ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲಬಹುದಾಗಿದೆ.
ಆಹಾರದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುವ ಹಾಗೂ ಸಿಹಿ ತಿನಿಸುಗಳನ್ನು ವರ್ಜಿಸುವುದರಿಂದ ಈ ಸಮಸ್ಯೆಯನ್ನು ಎದುರಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.