ಸಂಭೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ. ನೆಗಡಿ, ಜ್ವರದಂತಹ ಸಣ್ಣ ಪುಟ್ಟ ರೋಗದ ವಿರುದ್ದ ಹೋರಾಡಲು ದೇಹದಲ್ಲಿ ಶಕ್ತಿ ತುಂಬುತ್ತದೆ.
ಒತ್ತಡ ಕಡಿಮೆ ಮಾಡುತ್ತದೆ :
ಕೆಲಸ ಹಾಗೂ ಕೌಟುಂಬಿಕ ಒತ್ತಡ ಹೋಗಲಾಡಿಸಲು ಇದು ರಾಮಬಾಣ. ಲೈಂಗಿಕ ಕ್ರಿಯೆಯಿಂದ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಉಲ್ಲಾಸಗೊಂಡು, ಸಂತೋಷ ಇಮ್ಮಡಿಗೊಳ್ಳುತ್ತದೆ ಎಂದು ಅಧ್ಯಯನ ಹೇಳುತ್ತದೆ.
ನೋವು ಶಮನ :
ತಲೆ ನೋವು ಎಂಬ ಕಾರಣಕ್ಕೆ ಲೈಂಗಿಕ ಕ್ರಿಯೆಯಿಂದ ದೂರವಿರಬೇಡಿ. ಸಂಭೋಗದಲ್ಲಿ ತೊಡಗುವುದರಿಂದ ನೋವು ನಿವಾರಣೆಯಾಗುತ್ತದೆ. ಹಾರ್ಮೋನ್ ಆಕ್ಸಿಟೋಸಿನ್ ಐದು ಪಟ್ಟು ಹೆಚ್ಚಾಗುವುದರಿಂದ ನೋವಿನ ವಿರುದ್ದ ದೇಹ ಹೋರಾಡುತ್ತದೆ.
ದೀರ್ಘಾಯುಷ್ಯ :
ದೀರ್ಘ ಆಯುಷ್ಯ ಹೊಂದಬಹುದು. ಐದು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆ ನಡೆಸುವ ಪುರುಷರು ಬಹುಕಾಲ ಬದುಕುತ್ತಾರಂತೆ. ಆರೋಗ್ಯಪೂರ್ಣ ಚರ್ಮಕ್ಕೆ ಇದು ಸಹಕಾರಿ.
ರಕ್ತ ಪರಿಚಲನೆ ಹೆಚ್ಚಿಸುತ್ತದೆ :
ಸಂಭೋಗದಿಂದ ಹೃದಯ ಗತಿ ಏರುತ್ತದೆ. ಹೊಸ ರಕ್ತ ನಿಮ್ಮ ಅಂಗಾಂಗ ಹಾಗೂ ಜೀವಕೋಶಗಳಿಗೆ ಸೇರುತ್ತದೆ. ರಕ್ತ ಪರಿಚಲನೆ ಹೆಚ್ಚಾಗುತ್ತದೆ.
ಉತ್ತಮ ನಿದ್ರೆ :
ಉತ್ತಮ ನಿದ್ರೆಗೆ ಸಂಭೋಗ ಸಹಕಾರಿ. ರಾತ್ರಿ ಸರಿಯಾದ ನಿದ್ರೆ ಬರುವುದರಿಂದ ಆರೋಗ್ಯ ವೃದ್ಧಿಸುತ್ತದೆ. ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಅರ್ಧ ಗಂಟೆ ಸಂಭೋಗದಿಂದ 80 ರಷ್ಟು ಕ್ಯಾಲೋರಿ ಕಡಿಮೆಯಾಗುತ್ತದೆ.
(ವಿವಾಹಿತರಿಗೆ ಮಾತ್ರ)