ಕಾಯಿಲೆಗಳಿಗೆ ಜನ್ಮಜಾತ ಗ್ರಹಗಳೂ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ. ಅದರ ಜೊತೆಜೊತೆಗೆ ವಾಸ್ತುವಿನ ಹಸ್ತಕ್ಷೇಪವೂ ಇರುತ್ತದೆ. ಮನೆಗಳ ನಿರ್ಮಾಣ ಮತ್ತು ಒಳಾಂಗಣಕ್ಕೆ ಜನರು ಬಹಳ ಹಣ ಖರ್ಚು ಮಾಡುತ್ತಾರೆ. ಆದರೆ ವಾಸ್ತುವಿಗೆ ತಕ್ಕಂತೆ ನಿರ್ಮಾಣ ಮಾಡುವುದೇ ಇಲ್ಲ. ವಾಸ್ತು ದೋಷಗಳಿರುವ ಮನೆಯಲ್ಲಿ ವಾಸಿಸುವವರು ಅನೇಕ ಕಾಯಿಲೆಗಳಿಂದ ಬಳಲುತ್ತಾರೆ.
ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಮಾಡಿದರೂ ಪ್ರಯೋಜನವಾಗುವುದಿಲ್ಲ. ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದರ ಜೊತೆಗೆ ವಾಸ್ತು ದೋಷಗಳನ್ನು ನಿವಾರಿಸಿಕೊಂಡಲ್ಲಿ ಮಾತ್ರ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ವಾಸ್ತು ದೋಷಗಳಿಗೆ ಸಂಬಂಧಿಸಿದ ರೋಗಗಳು
ಅಡುಗೆ ಮನೆಯಲ್ಲಿ ವಾಸ್ತುದೋಷವಿದ್ದರೆ ಸಮಸ್ಯೆ ಖಚಿತ. ಕಿಚನ್ ನೈಋತ್ಯ ದಿಕ್ಕಿನಲ್ಲಿದ್ದರ ಆ ಮನೆಯ ಸದಸ್ಯರು ಅಜೀರ್ಣ ಮತ್ತು ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿರುತ್ತದೆ. ಅಡುಗೆ ಮನೆಯು ವಾಯುವ್ಯ ದಿಕ್ಕಿನಲ್ಲಿದ್ದರೆ ಅಸ್ಸೈಟ್ಸ್ ಎಂಬ ರೋಗ ಬರುತ್ತದೆ.
ಮನೆಯ ಸ್ನಾನದ ಕೋಣೆ, ಪೂಜಾ ಕೊಠಡಿ ಮತ್ತು ಮೆಟ್ಟಿಲುಗಳಿಗೂ ಮಹತ್ವದ ಸ್ಥಾನವಿದೆ. ಮೆಟ್ಟಿಲುಗಳು ಈಶಾನ್ಯ ದಿಕ್ಕಿನಲ್ಲಿದ್ದರೆ ಮನೆಯ ಸದಸ್ಯರು ಮಾನಸಿಕ ಒತ್ತಡದಲ್ಲಿಯೇ ಇರುತ್ತಾರೆ. ಗೊಂದಲ, ಬಿಪಿ, ಖಿನ್ನತೆ ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಮೆಟ್ಟಿಲುಗಳು ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಅಂದರೆ ಬೆಂಕಿಯ ಕೋನದ ಕಡೆಗೆ ಇದ್ದರೆ, ಜನನಾಂಗಗಳಿಗೆ ಮತ್ತು ಮೂತ್ರದ ಅಂಗಗಳಿಗೆ ಸಂಬಂಧಿಸಿದ ರೋಗಗಳು ಉದ್ಭವಿಸುತ್ತವೆ.
ಇನ್ನು ನೀರಿನ ಮೂಲವು ಪೂರ್ವದಲ್ಲಿ ನೆಲೆಗೊಂಡಿದ್ದರೆ ನಿರ್ಜಲೀಕರಣ, ಅತಿಸಾರ, ಜಠರದ ಉರಿತ, ಮಹಿಳೆಯರಲ್ಲಿ ರಕ್ತದ ಕೊರತೆಯಂತಹ ಸಮಸ್ಯೆಗಳು ಬರುತ್ತವೆ.
ಪಶ್ಚಿಮ ದಿಕ್ಕಿನಲ್ಲಿರುವ ನೀರಿನ ಮೂಲವು ಥೈರಾಯ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀಡುತ್ತದೆ. ಈಶಾನ್ಯ ದಿಕ್ಕಿನಲ್ಲಿರುವ ನೀರಿನ ಸಂಪನ್ಮೂಲಗಳು ಸಂಪತ್ತಿಗೆ ಪ್ರಯೋಜನಕಾರಿ. ಮಕ್ಕಳನ್ನು ಸುಂದರ ಮತ್ತು ಆರೋಗ್ಯವಂತರನ್ನಾಗಿ ಮಾಡುತ್ತದೆ.