ಭಾರತದ ಪ್ರತಿಯೊಬ್ಬರ ಮನೆಯಲ್ಲೂ ಅಕ್ಕಿ ಬಳಕೆ ಮಾಡಲಾಗುತ್ತದೆ. ದಿನದಲ್ಲಿ ಮೂರೂ ಹೊತ್ತು ಅನ್ನ ತಿನ್ನುವವರಿದ್ದಾರೆ. ಅಕ್ಕಿ ತೊಳೆದು ಸ್ವಚ್ಛಗೊಳಿಸಿದ ನಂತ್ರ ಆ ನೀರನ್ನು ಎಸೆಯುತ್ತಾರೆ. ಆದ್ರೆ ಅಕ್ಕಿ ತೊಳೆದ ನೀರಿನಲ್ಲಿ ಸಾಕಷ್ಟು ಔಷಧಿ ಗುಣವಿದೆ.
ದೇಹವನ್ನು ಹೈಡ್ರೀಕರಿಸಲು ಅಕ್ಕಿ ನೀರು ತುಂಬಾ ಒಳ್ಳೆಯದು. ಅಕ್ಕಿಯಲ್ಲಿ ಅನೇಕ ರೀತಿಯ ಪೌಷ್ಠಿಕಾಂಶವಿದೆ. ಅಕ್ಕಿ ತೊಳೆದಾಗ ಈ ಪೋಷಕಾಂಶಗಳು ಆ ನೀರಿನಲ್ಲಿ ಹೊರಬರುತ್ತವೆ. ಅಕ್ಕಿ ನೀರು ಕುಡಿಯುವುದರಿಂದ ದೇಹವು ಹೈಡ್ರೀಕರಿಸುತ್ತದೆ. ಸುಸ್ತು ಕಡಿಮೆಯಾಗುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸಲು ಅಕ್ಕಿ ನೀರು ಸಹಕಾರಿ. ಅಕ್ಕಿ ನೀರಿನಲ್ಲಿ ಸೋಡಿಯಂ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ರಕ್ತದೊತ್ತಡದ ತೊಂದರೆ ಇರುವ ಜನರು ಅಕ್ಕಿ ನೀರನ್ನು ಕುಡಿಯಬೇಕು.
ಅಕ್ಕಿ ತೊಳೆದ ನೀರು ಕುಡಿಯುವುದ್ರಿಂದ ಹೊಟ್ಟೆ ಸ್ವಚ್ಛಗೊಳ್ಳುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಅನಿಲ ಹಾಗೂ ಮಲಬದ್ಧತೆ ಸಮಸ್ಯೆಯಿರುವವರು ಅಕ್ಕಿ ನೀರನ್ನು ಕುಡಿಯಬೇಕು.
ಅಕ್ಕಿ ನೀರು ಚರ್ಮಕ್ಕೂ ಪ್ರಯೋಜನಕಾರಿ. ಖನಿಜಗಳು, ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಈ ನೀರಿನಲ್ಲಿದ್ದು, ಚರ್ಮ ಮತ್ತು ಕೂದಲಿಗೆ ವರದಾನ. ಚರ್ಮದ ಹೊಳಪನ್ನು ಇದು ಹೆಚ್ಚಿಸುತ್ತದೆ. ಮೊಡವೆಗಳಂತಹ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ.
ಅಕ್ಕಿ ನೀರಿನಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವ ದೇಹಕ್ಕೆ ಅಕ್ಕಿ ನೀರು ಅತ್ಯುತ್ತಮ. ಪ್ರತಿದಿನ ಒಂದು ಲೋಟ ಅಕ್ಕಿ ನೀರನ್ನು ಸೇವಿಸಿದರೆ ದೇಹವು ಸಾಕಷ್ಟು ಶಕ್ತಿಯನ್ನು ಪಡೆಯುತ್ತದೆ.