alex Certify ರಾಜ್ಯದ_ಎಲ್ಲಾ_ಶಾಲಾ ವಿದ್ಯಾರ್ಥಿಗಳಿಗೆ `ಮೊಬೈಲ್ ದುಷ್ಪರಿಣಾಮ’ಗಳ ಬಗ್ಗೆ ಜಾಗೃತಿ ಮೂಡಿಸಿ : ಶಿಕ್ಷಣ ಇಲಾಖೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ_ಎಲ್ಲಾ_ಶಾಲಾ ವಿದ್ಯಾರ್ಥಿಗಳಿಗೆ `ಮೊಬೈಲ್ ದುಷ್ಪರಿಣಾಮ’ಗಳ ಬಗ್ಗೆ ಜಾಗೃತಿ ಮೂಡಿಸಿ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ರಾಜ್ಯದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ನೋಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 

ವಿದ್ಯಾರ್ಥಿಗಳಿಗೆ ಮೊಬೈಲ್ ನೋಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕರ್ನಾಟಕ  ಕನ್ನಡ ದಿನ ಪತ್ರಿಕೆಯಲ್ಲಿ “ಸರ್ಕಾರಿ ಶಾಲೆಗಳ 8500 ಮಕ್ಕಳಲ್ಲಿ ದೃಷ್ಟಿದೋಷ’ ಶೀರ್ಷಿಕೆಯಡಿ ದಿನಾಂಕ:22.08.2023 ರಂದು ಮಕ್ಕಳಲ್ಲಿ ಮೊಬೈಲ್ ವೀಕ್ಷಣೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಲೇಖನ ಪ್ರಕಟವಾಗಿದೆ.

ಈ ಲೇಖನವನ್ನು ಉಲ್ಲೇಖಿಸಿ ಮಾನ್ಯ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿರುವ ಮಣಾಮ ಚಿಕ್ಕ ವಯಸ್ಸಿನಲ್ಲೇ ದೃಷ್ಟಿದೋಷಕ್ಕೆ ಒಳಗಾಗಿ ಕನ್ನಡಕ ಹಾಕಿಕೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ – ಸಂಯುಕ್ತ ಕರ್ನಾಟಕ ಕನ್ನಡ ದಿನ ಪತ್ರಿಕೆಯಲ್ಲಿ ಲೇಖನ ಪಕಟವಾಗಿರುವ ಬಗ್ಗೆ ತಿಳಿಸುತ್ತಾ, ಆರೋಗ್ಯ ಇಲಾಖೆಯ ಸಹಕಾರದಲ್ಲಿ ಮಕ್ಕಳಿಗೆ ಮೊಬೈಲ್ ನೋಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲು ಕ್ರಮವಹಿಸುವಂತೆ ಸೂಚನೆ ನೀಡಿರುತ್ತಾರೆ.

ಈ ಕುರಿತು ಕ್ರಮಕ್ಕೆ ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ, ಬೆಂಗಳೂರು ರವರೂ ಸಹ ತಿಳಿಸಿರುತ್ತಾರೆ. ಮೇಲಿನ ಅಂಶಗಳ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳ ಕಣ್ಣಿನ ಆರೋಗ್ಯದ ಹಿತದೃಷ್ಟಿಯಿಂದ ವೈಜ್ಞಾನಿಕವಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಆರೋಗ್ಯ ಇಲಾಖೆಯ ಸಹಕಾರದಲ್ಲಿ ‘ಮಕ್ಕಳಲ್ಲಿ ಮೊಬೈಲ್ ವೀಕ್ಷಣೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲಾ ಶಾಲೆಗಳ ಮುಖ್ಯ ಸ್ಮರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲು ಆದೇಶಿಸಿದ, ಸದು ಜಾಗೃತಿ ಕಾರ್ಯಕ್ರಮವನ್ನು ಅಕ್ಟೋಬರ್, 2023 ರ ಮಾಹೆಯೊಳಗೆ ಪೂರ್ಣಗೊಳಿಸಿ, ಜಿಲ್ಲಾ ಹಂತದಲ್ಲಿ ಕ್ರೋಡಿಕರಿಸಿ ಈ ಕೆಳಕಂಡ ನಮೂನೆಯಲ್ಲಿ ದಿನಾಂಕ:05/11/20231ರ ಒಳಗೆ ಈ ಕಚೇರಿಗೆ ಅಧಿಕೃತ ವರದಿ ಸಲ್ಲಿಸಲು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...