ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 6 ವಿಕೆಟ್ ಗಳಿಂದ ಮಣಿಸಿದ ಭಾರತ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 49.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 228 ರನ್ ಗಳಿಸಿತು. ತಾವೀದ್ ರಿದಯ್ 100, ತಾಂಜಿದ್ ಹಸನ್ 25, ಜಕರ್ ಅಲಿ 68 ರನ್ ಗಳಿಸಿದರು. ಭಾರತದ ಪರವಾಗಿ ಮೊಹಮ್ಮದ್ ಶಮಿ 5, ಹರ್ಷಿತ್ ರಾಣಾ 3, ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ 46.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ರೋಹಿತ್ ಶರ್ಮಾ 41, ಶುಭಮನ್ ಗಿಲ್ ಅಜೇಯ 101, ವಿರಾಟ್ ಕೊಹ್ಲಿ 22, ಶ್ರೇಯಸ್ ಅಯ್ಯರ್ 15, ಅಕ್ಷರ ಪಟೇಲ್ 8, ಕೆಎಲ್ ರಾಹುಲ್ ಅಜೇಯ 41 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ರಶೀದ್ ಹುಸೇನ್ 2 ವಿಕೆಟ್ ಪಡೆದರು.