![Rahul Gandhi Bungalow: कांग्रेस नेता राहुल गांधी को उनका पुराना सरकारी बंगला आवंटित, जानिए क्या होगा एड्रेस | Rahul Gandhi Bungalow: Congress leader Rahul Gandhi allotted his old ...](https://npg.news/h-upload/2023/08/08/1186161-rahul-gandhi-bungalow.jpg)
ಮೋದಿ ಉಪನಾಮದ ಹಿನ್ನೆಲೆಯಲ್ಲಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಕಾರಣಕ್ಕಾಗಿಯೇ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು.
ಲೋಕಸಭಾ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ದೆಹಲಿಯ ತುಘಲಕ್ ರಸ್ತೆಯಲ್ಲಿ ರಾಹುಲ್ ಗಾಂಧಿಯವರಿಗೆ ನೀಡಲಾಗಿದ್ದ ಬಂಗಲೆಯನ್ನು ತೆರವು ಮಾಡಲು ಸೂಚಿಸಲಾಗಿದ್ದು, ಏಪ್ರಿಲ್ ನಲ್ಲಿ ಅವರು ಬಂಗಲೆ ತೊರೆದಿದ್ದರು.
ಇದೀಗ ಸುಪ್ರೀಂ ಕೋರ್ಟ್, ಸೂರತ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿದ್ದು, ಹೀಗಾಗಿ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಮರು ಸ್ಥಾಪಿಸಲಾಗಿದೆ. ಇದೀಗ ರಾಹುಲ್ ಗಾಂಧಿಯವರಿಗೆ ನೀಡಲಾಗಿದ್ದ ತುಘಲಕ್ ರಸ್ತೆಯ ಸರ್ಕಾರಿ ಬಂಗಲೆಯನ್ನು ಮತ್ತೆ ಅವರಿಗೆ ಹಂಚಿಕೆ ಮಾಡಲಾಗಿದೆ.