ಜಪಾನ್‌ನ ಪ್ರಮುಖ ಕಾರು ತಯಾರಕ ಕಂಪನಿ ಸುಜುಕಿ, ಆಲ್ ನ್ಯೂ ಸುಜುಕಿ ಎರ್ಟಿಗಾ ಸ್ಪೋರ್ಟ್ಸ್ ಎಫ್‌ಎಫ್ ಪರಿಚಯಿಸಿದೆ. 2021 ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಶೋನಲ್ಲಿ ಕಂಪನಿಯು ಕಾರಿನ ಸ್ಪೋರ್ಟ್ಸ್ ಎಫ್ ಎಫ್ ರೂಪಾಂತರವನ್ನು ಪರಿಚಯಿಸಿತ್ತು.
ಈಗ ಈ ಕಾರು ಸ್ಟ್ಯಾಂಡರ್ಡ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಎಫ್ಎಫ್ ರೂಪಾಂತರಗಳಲ್ಲಿ ಲಭ್ಯವಿದೆ.
ಮೊದಲಿಗಿಂತ ಉತ್ತಮ ಚಾಲನಾ ಅನುಭವವನ್ನು ಇದು ನೀಡಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್ ಎಫ್ ರೂಪಾಂತರದಲ್ಲಿ ಅನೇಕ ಕಾಸ್ಮೆಟಿಕ್ ಬದಲಾವಣೆಯಾಗಿದೆ. ಎರ್ಟಿಗಾ ಸ್ಪೋರ್ಟ್ ಆವೃತ್ತಿಯು ಪಿಯಾನೋ ಬ್ಲ್ಯಾಕ್ ಫಿನಿಶ್ ಜೊತೆಗೆ ಮುಂಭಾಗದ ಗ್ರಿಲ್, ಏರ್ ಡ್ಯಾಮ್ ಮತ್ತು ಫಾಗ್ ಲ್ಯಾಂಪ್‌ಗಳು ಮತ್ತು ಸಾಕಷ್ಟು ಆಕರ್ಷಕ ಹೊರಭಾಗಗಳನ್ನು ಹೊಂದಿದೆ.
ಇದು 1.5 ಲೀಟರ್ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 103 ಎಚ್ಪಿ ಪವರ್ ಮತ್ತು 138 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. 2021 ರ ಸುಜುಕಿ ಎರ್ಟಿಗಾ ಸ್ಪೋರ್ಟ್ ಆವೃತ್ತಿಯನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
2021 ಸುಜುಕಿ ಎರ್ಟಿಗಾ ಸ್ಪೋರ್ಟ್ ಆವೃತ್ತಿಯಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಂಜಿನ್ ಮೊಬಿಲೈಜರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹೈ ಸ್ಪೀಡ್ ಅಲರ್ಟ್, ಡ್ಯುಯಲ್ ಏರ್‌ಬ್ಯಾಗ್‌ಗಳು ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.