ಎಲ್ ಐ ಸಿ ಪಾಲಿಸಿ ತೆಗೆದುಕೊಂಡಿದ್ದವರಿಗೊಂದು ಮಹತ್ವದ ಸುದ್ದಿಯಿದೆ. ಎಲ್ ಐ ಸಿ, ತನ್ನೆಲ್ಲ ಪಾಲಿಸಿದಾರರಿಗೆ ಮಹತ್ವದ ಮಾಹಿತಿ ನೀಡಿದೆ. ಎಲ್ ಐ ಸಿ, ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಎಲ್ ಐ ಸಿ ಪಾಲಿಸಿದಾರರು, ಪಾಲಿಸಿಯನ್ನು ಪಾನ್ ಜೊತೆ ಲಿಂಕ್ ಮಾಡುವುದು ಅವಶ್ಯಕ ಎಂದು ಟ್ವೀಟ್ ಮಾಡಲಾಗಿದೆ.
ಸರ್ಕಾರ ಪಾನ್ ಮತ್ತು ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31, 2022 ಕ್ಕೆ ವಿಸ್ತರಿಸಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಕೂಡ ಇದೇ ರೀತಿಯ ನಿಯಮವನ್ನು ರೂಪಿಸಿದೆ. ಹೂಡಿಕೆದಾರರಿಗೆ ತಮ್ಮ ಪಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡುವಂತೆ ಕೇಳಿದೆ. ಎಲ್ಐಸಿ ಕೂಡ ಪಾನ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.
ಎಲ್ ಐ ಸಿ ವೆಬ್ಸೈಟ್ ನಲ್ಲಿ ಪಾಲಿಸಿ ಜೊತೆ ಪಾನ್ ವಿವರ ನೀಡಬೇಕು. ಮೊಬೈಲ್ ಸಂಖ್ಯೆ ನಮೂದಿಸುತ್ತಿದ್ದರೆ ಒಟಿಪಿ ಬರುತ್ತದೆ. ಒಟಿಪಿ ನಂತ್ರ ಫಾರ್ಮ್ ಸಲ್ಲಿಸಬೇಕು. ಆಗ ನೋಂದಣಿ ವಿನಂತಿಯನ್ನು ಸ್ವೀಕರಿಸಲಾಗಿದೆ ಎಂಬ ಸಂದೇಶ ಬರುತ್ತದೆ. ಆಗ ನಿಮ್ಮ ಪಾನ್ ನಂಬರ್, ಪಾಲಿಸಿಯೊಂದಿಗೆ ಲಿಂಕ್ ಆಗುತ್ತದೆ.
ಅಧಿಕೃತ ವೆಬ್ಸೈಟ್ https://www.licindia.in/ ಗೆ ಹೋಗಿ ಎಲ್‌ಐಸಿ ಪಾಲಿಸಿಯ ಆನ್‌ಲೈನ್ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಆದ್ರೆ ಪಾಲಿಸಿ ಸ್ಥಿತಿ ನೋಡಲು ನೀವು ಹೆಸರು ನೋಂದಾಯಿಸಿಕೊಳ್ಳಬೇಕು. ಇದಕ್ಕೆ ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ. ಜನ್ಮ ದಿನಾಂಕ, ಹೆಸರು, ಪಾಲಿಸಿ ಸಂಖ್ಯೆಯನ್ನು ನಮೂದಿಸಬೇಕು. ಒಮ್ಮೆ ನೋಂದಾಯಿಸಿದ ನಂತ್ರ ಯಾವಾಗ ಬೇಕಾದ್ರೂ ನೀವು ಸ್ಥಿತಿಯ ಪರಿಶೀಲನೆ ಮಾಡಬಹುದು. ಎಸ್ಎಂಎಸ್ ಮೂಲಕವೂ ನೀವು ಪಾಲಿಸಿ ಮಾಹಿತಿ ಪಡೆಯಬಹುದು. 56677 ನಂಬರ್ ಗೆ ಎಸ್ ಎಂಎಸ್ ಮಾಡುವ ಮೂಲಕ ಪಾಲಿಸಿ ಬಗ್ಗೆ ಮಾಹಿತಿ ಪಡೆಯಬಹುದು.