ಬಿಎಂಡಬ್ಲ್ಯೂ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಎಂಡಬ್ಲ್ಯೂ ಐಎಕ್ಸ್ ಎಸ್‌ಯುವಿ ಇದೇ ಡಿಸೆಂಬರ್ 13, 2021ರಲ್ಲಿ ಲಾಂಚ್ ಆಗಲಿದೆ.
ಮುಂದಿನ ಆರು ತಿಂಗಳಲ್ಲಿ ಭಾರತದಲ್ಲಿ ಬಿಎಂಡಬ್ಲ್ಯೂ ಲಾಂಚ್ ಮಾಡಲು ಉದ್ದೇಶಿಸಿರುವ ಮೂರು ಇವಿ ಕಾರುಗಳಲ್ಲಿ ಐಎಕ್ಸ್ ಎಸ್‌ಯುವಿ ಮೊದಲನೆಯದ್ದಾಗಿದೆ. ಎರಡನೆಯದ್ದಾದ ಮಿನಿ ಕೂಪರ್ ಎಸ್‌ಇ ಮಾರ್ಚ್ 2022ಕ್ಕೆ ಮಾರಾಟಕ್ಕೆ ಬರಲಿದೆ. ಮೂರನೇ ಇವಿಯಾದ ಐ4 ಲಕ್ಸುರಿ ಎಲೆಕ್ಟ್ರಿಕ್ ಸೆಡಾನ್ ಜೂನ್ 2022 ರಲ್ಲಿ ಆಗಮಿಸುವ ನಿರೀಕ್ಷೆ ಇದೆ.
ಸದ್ಯಕ್ಕೆ ಐಎಕ್ಸ್‌ನ ಎಕ್ಸ್‌ಡ್ರೈವ್40 ಮಾಡೆಲ್ ಮಾತ್ರವೇ ಭಾರತಕ್ಕೆ ಬರಲಿದೆ. ದೇಶಾದ್ಯಂತ ಇರುವ ಬಿಎಂಡಬ್ಲ್ಯೂ ಡೀಲರ್‌ಶಿಪ್‌ಗಳ ಬಳಿ ಈ ಎಸ್‌ಯುವಿಗೆ ಬುಕಿಂಗ್ ಲಭ್ಯವಿದೆ.
BIG BREAKING NEWS: ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನ 600ಕ್ಕೂ ಹೆಚ್ಚು ಜನ ಮಹಾಮಾರಿಗೆ ಬಲಿ
ಈ ಬಿಎಂಡಬ್ಲ್ಯೂನ ಎಸ್‌ಯುವಿಯಲ್ಲಿ, ಬ್ರಾಂಡ್‌ನ ಐದನೇ ತಲೆಮಾರಿನ ಎಲೆಕ್ಟ್ರಿಕ್ ಪವರ್ ಟ್ರೇನ್ ಇದ್ದು, ಪ್ರತಿಯೊಂದು ಆಕ್ಸೆಲ್ ಮೇಲೆ ಒಂದು ಎಲೆಕ್ಟ್ರಿಕ್ ಮೋಟರ್‌ಗಳು ಇರಲಿದ್ದು, ಎಲೆಕ್ಟ್ರಿಕ್ ಆಲ್-ವೀಲ್-ಡ್ರೈವ್ ಕಾರ್ಯಾಚರಣೆಗೆ ಅನುವಾಗಲಿದೆ. 76.6 ಕೆಡಬ್ಲ್ಯೂಎಚ್ ಬ್ಯಾಟರಿ ಹೊಂದಿರುವ ಈ ಎಸ್‌ಯುವಿಯಲ್ಲಿ 240 ಕಿವ್ಯಾ ಆಥವಾ 322 ಬಿಎಚ್‌ಪಿ ಮತ್ತು 630 ಎನ್‌ಎಂನಷ್ಟು ಗರಿಷ್ಠ ಟಾರ್ಕ್ ಉತ್ಪಾದನೆಯಾಗಲಿದೆ. ಈ ಎಸ್‌ಯುವಿ ಒಂದು ಚಾರ್ಜ್‌ಗೆ 425ಕಿಮೀ ಮೈಲೇಜ್ ನೀಡಲಿದ ಎಂದು ಹೇಳಲಾಗಿದೆ.
ಮೂರು ಚಾರ್ಜಿಂಗ್ ಆಯ್ಕೆಗಳನ್ನು ಬಿಎಂಡಬ್ಲ್ಯೂ ಇಂಡಿಯಾ ನೀಡುತ್ತಿದೆ — 2.3ಕಿವ್ಯಾ ಸ್ಟಾಂಡರ್ಡ್ ಚಾರ್ಜಿಂಗ್ ಕೇಬಲ್, 7.4ಕಿವ್ಯಾ 1-ಫೇಸ್ ವಾಲ್‌ಬಾಕ್ಸ್ ಚಾರ್ಜರ್, 11ಕಿವ್ಯಾ 3-ಫೇಸ್ ವಾಲ್‌ಬಾಕ್ಸ್ ಚಾರ್ಜರ್‌ಗಳನ್ನು ನೀಡಲಾಗಿದೆ. ಚಾರ್ಜರ್‌ಗಳ ಕ್ಷಮತೆಯ ಆಧಾರದ ಮೇಲೆ ಬ್ಯಾಟರಿಯ ಒಂದು ಸುತ್ತಿನ ಚಾರ್ಜ್ ಪೂರ್ಣಗೊಳ್ಳಲು 7.25-36 ಗಂಟೆಗಳು ಹಿಡಿಯುತ್ತವೆ.
ಇಂಟಿರಿಯರ್ ಕ್ಯಾಬಿನ್‌ನಲ್ಲಿ ಬಿಎಂಡಬ್ಲ್ಯೂನ ಪ್ರೀಮಿಯಂ ಎಸ್‌ಯುವಿಗಳಲ್ಲಿರುವ ಎಲ್ಲಾ ಅತ್ಯಾಧುನಿಕ ಫೀಚರ್‌ಗಳನ್ನು ನೀಡಲಾಗಿದೆ.