ಲಂಡನ್: ದೇಶಕ್ಕೆ ಹೆಮ್ಮೆಯ ಕ್ಷಣದಲ್ಲಿ, ರಿಷಿ ಸುನಕ್ ಇಂಗ್ಲೆಂಡ್ ಪ್ರಧಾನಿಯಾಗಿದ್ದಾರೆ. ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ರಿಷಿ ಅವರು ಇಷ್ಟೊಂದು ದೊಡ್ಡ ಹುದ್ದೆಗೆ ಏರುತ್ತಲೇ ಬಾಲಿವುಡ್ ಗಾಯಕಿ ಅಲಿಶಾ ಚಿನಾಯ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಚಿತ್ರವನ್ನು ಶೇರ್ ಮಾಡಿದ್ದು ಅದೀಗ ಭಾರಿ ವೈರಲ್ ಆಗಿದೆ.
ವೈರಲ್ ಆಗಲು ಕಾರಣ ಏನೆಂದರೆ ಈ ದಂಪತಿಯನ್ನು ಗಾಯಕಿ ಅಲಿಶಾ, ರಾಮ ಮತ್ತು ಸೀತಾ ದಂಪತಿಯಂತೆ ಚಿತ್ರಿಸಿದ್ದಾರೆ. ಎಂಥ ಐತಿಹಾಸಿಕ ಕ್ಷಣವಿದು ಎಂದು ಶೀರ್ಷಿಕೆ ನೀಡಿರುವ ಅವರು, ರಾಮ, ಸೀತೆಯಂತೆ ಸುನಕ್ ದಂಪತಿಯನ್ನು ಚಿತ್ರಿಸಿ ಅದಕ್ಕೆ “ಚಮ್ಕೆಗಾ ಇಂಡಿಯಾ” ಅಂದರೆ, ಭಾರತವು ಹೊಳೆಯುತ್ತದೆ ಎಂಬ ಅರ್ಥದ ಹಾಡನ್ನು ಹಾಡಿದ್ದಾರೆ.
ಬ್ರಿಟನ್ ಸಂಸತ್ತಿನಲ್ಲಿ ಮೊದಲ ಬಾರಿಗೆ ಭಗವದ್ಗೀತೆಯನ್ನು ಮುಟ್ಟಿ ಪ್ರಮಾಣಸ್ವೀಕಾರ ಮಾಡಿದ ವ್ಯಕ್ತಿ ರಿಷಿ ಸುನಕ್. ರಿಷಿ ಸುನಕ್ ಪೋಷಕರು ಮೂಲತಃ ಭಾರತದವರು. ವೃತ್ತಿಯಿಂದ ಫಾರ್ಮಾಸಿಸ್ಟ್‌ಗಳಾಗಿದ್ದ ಅವರು 1960 ರಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಹೋಗಿ ಅಲ್ಲಿಯೇ ವಾಸವಾಗಿದ್ದರು. ಅಲ್ಲದೆ, ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಮಗಳು ಅಕ್ಷತ ಮೂರ್ತಿಯನ್ನು ಮದುವೆ ಮಾಡಿಕೊಂಡರು. ಸದ್ಯ ರಿಷಿ ಅವರಿಗೆ ಕೃಷ್ಣ, ಅನೌಷ್ಕ ಎಂಬ ಇಬ್ಬರು ಮಕ್ಕಳಿದ್ದಾರೆ.