ಅಮೆರಿಕದ ನೆವೆಡಾದ ಲಿಂಕನ್ ಕಂಟ್ರಿಯ ರಾಷೆಲ್ನ ದಕ್ಷಿಣಕ್ಕೆ 48ಕಿಮೀ ದೂರದಲ್ಲಿರುವ ಮರುಭೂಮಿಯ ಪ್ರದೇಶವೊಂದರಲ್ಲಿ ಬಹಳ ನಿಗೂಢವಾದ ಪ್ರದೇಶವೊಂದು ಇದೆ.
ಏರಿಯಾ 51 ಹೆಸರಿನ ಈ ಪ್ರದೇಶ ಅಮೆರಿಕನ್ ಮಿಲಿಟರಿಯ ಚಟುವಟಿಕೆಗಳ ರಹಸ್ಯ ತಾಣವೂ ಆಗಿದೆ.
ಅನ್ಯಗ್ರಹ ಜೀವಿಗಳು ಹಾಗೂ ಅನ್ಯಗ್ರಹದ ಗಗನ ನೌಕೆಗಳನ್ನು ಅಮೆರಿಕದ ಮಿಲಿಟರಿ ಈ ಜಾಗದಲ್ಲಿ ಬಚ್ಚಿಟ್ಟಿದೆ ಎಂದು ನಂಬಲಾಗಿದೆ.
ಮನ ಸೂರೆಗೊಳ್ಳುತ್ತೆ ವಿಮಾನ ನಿಲ್ದಾಣದಲ್ಲಿ ಗುಡ್ಬೈ ಹೇಳಲು ಅನುಮತಿ ಕೇಳಿದ ಪುಟಾಣಿ ವಿಡಿಯೋ
ಅಂದಹಾಗೆ ಏರಿಯಾ 51ಕ್ಕೆ ಬಂದು ಅಲ್ಲಿರುವ ಅನ್ಯಗ್ರಹ ಜೀವಿಗಳನ್ನು ಕಾಣಲು ಕೋರಿ ಮಾಡಿದ್ದ ಜೋಕ್ ಒಂದು ಎರಡು ವರ್ಷಗಳ ಹಿಂದೆ ವೈರಲ್ ಆಗಿತ್ತು. ಸೆಪ್ಟೆಂಬರ್ 20, 2019ರಲ್ಲಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾದ ಈ ಜೋಕ್ ಎರಡು ದಶಲಕ್ಷಕ್ಕೂ ಹೆಚ್ಚಿನ ಮಂದಿಯನ್ನು ತಲುಪಿತ್ತು.
ಇದರಿಂದಾಗಿ 6000ದಷ್ಟು ಮಂದಿ ಏರಿಯಾ 51ರ ಬಳಿ ಜಮಾಯಿಸಿದ್ದರು. ಬರೀ 10 ದಿನಗಳ ಹಿಂದೆ ಇದೇ ಪ್ರದೇಶದ 5 ಮೈಲಿಯೊಳಗೆ ನೆದರ್ಲೆಂಡ್ಸ್ನ ಯೂಟ್ಯೂಬರ್ ಒಬ್ಬನನ್ನು ಅತಿಕ್ರಮಣ ಮಾಡಿದ ಆಪಾದನೆ ಮೇಲೆ ಬಂಧಿಸಲಾಗಿತ್ತು.
ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಯುವತಿಯ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್
ಏರಿಯಾ 51ರ ರಹ್ಯಸದ ಮೂಲವು 1950ರ ದಶಕಕ್ಕೆ ತಲುಪುತ್ತದೆ. ಅಂದಿನ ಸೋವಿಯತ್ ಭೂ ಪ್ರದೇಶದ ಮೇಲೆ ರಹಸ್ಯ ವೈಮಾನಿಕ ಚಟುವಟಿಕೆಗಳನ್ನು ಮಾಡುತ್ತಿದ್ದ ಅಮೆರಿಕ ಮಿಲಿಟರಿ ಮಾಹಿತಿಗಳನ್ನು ಹೆಕ್ಕುತ್ತಿತ್ತು. ಈ ವೇಳೆ ಸೋವಿಯತ್ ಭದ್ರತಾ ಪಡೆಗಳು ಅಮೆರಿಕದ ವಿಮಾನಗಳನ್ನು ಹೊಡೆದುರುಳಿಸುವ ಭಯವೂ ಇತ್ತು. ಈ ಸವಾಲನ್ನು ಎದುರಿಸಲು 1954ರಲ್ಲಿ ಅಮೆರಿಕ ವಿಶೇಷ ಗೂಢಾಚಾರಿಕೆ ವಿಮಾನದ ಅಭಿವೃದ್ಧಿಗೆ ಮುಂದಾಯಿತು. ಭಾರೀ ಎತ್ತರದಲ್ಲಿ ಹಾರಾಡುತ್ತಾ ಸುರಕ್ಷಿತವಾಗಿ ಸರ್ವೇಕ್ಷಣೆ ಮಾಡಬಲ್ಲ ಗೂಢಾಚರ ವಿಮಾನದ ಅಭಿವೃದ್ಧಿ ಮಾಡುವ ’ಪ್ರಾಜೆಕ್ಟ್ ಅಕ್ವಾಟೋನ್’ಅನ್ನು ಆರಂಭಿಸಲಾಯಿತು. ಶತ್ರುಗಳ ಕಣ್ಣಿಗೆ ಈ ಬೆಳವಣಿಗೆ ಬೀಳಬಾರದು ಎಂಬ ಉದ್ದೇಶದಿಂದ ಇದಕ್ಕಾಗಿ ಏರಿಯಾ 51ಅನ್ನು ಆರಿಸಿಕೊಂಡು ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶಕ್ಕೆ ನಿಷೇಧ ಹೇರಲಾಯಿತು. ರಹಸ್ಯ ಸವಲತ್ತೊಂದರಲ್ಲಿ ವಿಮಾನದ ಅಭಿವೃದ್ಧಿ ಕೆಲಸ ಆರಂಭವಾಯಿತು.
BIG NEWS: 1 ರಿಂದ 5 ನೇ ತರಗತಿ ಆರಂಭ, ಸರ್ಕಾರದಿಂದ ಸಿದ್ಧತೆ: ಸಚಿವ ನಾಗೇಶ್ ಮಾಹಿತಿ
ಹತ್ತಿರದಲ್ಲೇ ಪರಮಾಣು ಪರೀಕ್ಷಾ ಪ್ರದೇಶವಿದ್ದ ಕಾರಣ ಏರಿಯಾ 51ಕ್ಕೆ ಈ ಹೆಸರು ಬಂದಿದೆ. 1955ರಲ್ಲಿ ವಿಚಿತ್ರ ಹಾರಾಟದ ಅನೇಕ ದೃಶ್ಯಾವಳಿಗಳು ಪ್ರದೇಶದ ನೆತ್ತಿಯ ಮೇಲೆ ಕಾಣಿಸುತ್ತಿದ್ದವು. ಅಮೆರಿಕ ವಾಯುಪಡೆಯ ಹೊಸ ವಿಮಾನ ಯು-2ನ ಪರೀಕ್ಷೆ ಸಹ ಅದೇ ವೇಳೆ ಆರಂಭಗೊಂಡಿತ್ತು. ಆಗಸದಲ್ಲಿ 60,000 ಅಡಿಗೂ ಹೆಚ್ಚಿನ ಎತ್ತರದಲ್ಲಿ ಹಾರಬಲ್ಲ ವಿಮಾನವು ನಿಗೂಢವಾದ ಹಾರುವ ವಸ್ತುವಂತೆ ಅನಿಸುತ್ತಿತ್ತು. ಇದರಿಂದಾಗಿ ಅನಾಮಿಕ ಹಾರುವ ವಸ್ತು (ಯುಎಫ್ಓ)ನ ಉಲ್ಲೇಖ ಬಂದಿತ್ತು.
ಈ ಹಾರುವ ವಸ್ತುಗಳೆಲ್ಲಾ ತನ್ನದೇ ವೈಮಾನಿಕ ಪರಿಕರಗಳು ಎಂದು ಅಮೆರಿಕನ್ ಮಿಲಿಟರಿಗೆ ಗೊತ್ತಿದ್ದರೂ ರಹಸ್ಯ ಕಾಪಾಡಿಕೊಳ್ಳುವ ನಿಟ್ಟಿನಿಂದ ಯಾವುದನ್ನೂ ಬಹಿರಂಗ ಮಾಡಿರಲಿಲ್ಲ.
ಶಾರೀರಿಕ ಸಂಬಂಧಕ್ಕೂ ಮುನ್ನ ಈ ʼಆಹಾರʼದಿಂದ ದೂರವಿರಿ
ಇದಾದ 60 ವರ್ಷಗಳ ಬಳಿಕ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಏರಿಯಾ 51ರ ಸಂಬಂಧ ಕೆಲವೊಂದು ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿ, ಜಾಗದ ನಕ್ಷೆಗಳನ್ನು ಹಂಚಿಕೊಂಡಿದೆ. ಈ ಜಾಗವು ಅಮೆರಿಕ ವಾಯುಪಡೆಗೆ ಸೇರಿದ್ದಾದರೂ, ಯು-2 ಮತ್ತು ಆಕ್ಸ್ಕಾರ್ಟ್ನಂಥ ಸರ್ವೇಕ್ಷಣಾ ವಿಮಾನಗಳ ಪ್ರಯೋಗಾರ್ಥ ಪರೀಕ್ಷೆಗಳಿಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ.
ಸಿನಿಮಾಗಳು ಹಾಗೂ ಟಿವಿ ಶೋಗಳ ಕಾರಣದಿಂದ ಈ ವಿಚಾರವಾಗಿ ಬಹಳಷ್ಟು ಮಿಥ್ಯೆಗಳು ತೇಲಾಡಿದ್ದು, ಜನಪ್ರಿಯ ಸಂಸ್ಕೃತಿಯಲ್ಲಿ ಏರಿಯಾ 51 ಇನ್ನೂ ಸಹ ಬಹಳ ಆಸಕ್ತಿಕರ ವಿಚಾರವಾಗಿ ಉಳಿದುಕೊಂಡಿದೆ.