alex Certify ಮನುಷ್ಯರ ನಡುವೆಯೇ ಮಾರುವೇಷದಲ್ಲಿ ಬದುಕುತ್ತಿವೆ ಏಲಿಯನ್‌ಗಳು; ವಿಜ್ಞಾನಿಗಳ ಹೊಸ ಸಂಶೋಧನೆಯಲ್ಲಿ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯರ ನಡುವೆಯೇ ಮಾರುವೇಷದಲ್ಲಿ ಬದುಕುತ್ತಿವೆ ಏಲಿಯನ್‌ಗಳು; ವಿಜ್ಞಾನಿಗಳ ಹೊಸ ಸಂಶೋಧನೆಯಲ್ಲಿ ಬಹಿರಂಗ…!

ಏಲಿಯನ್‌ಗಳ ಬಗ್ಗೆ ಸಾಕಷ್ಟು ಕುತೂಹಲ ಮೊದಲಿನಿಂದಲೂ ಇದೆ. ಭೂಮಿಯ ಮೇಲೆ ಈ ಜೀವಿಗಳು ಇವೆಯೋ? ಇಲ್ಲವೋ ಎಂಬ ಗೊಂದಲ ಕೂಡ ಹೊಸದೇನಲ್ಲ. ಬಹಳಷ್ಟು ಸಮಯದಿಂದ ವಿಜ್ಞಾನ ಲೋಕ ಕೂಡ ಅನ್ಯಲೋಕದ ಜೀವಿಗಳನ್ನು ಹುಡುಕುತ್ತಿದೆ.

ದಶಕಗಳ ಸಂಶೋಧನೆಯ ಹೊರತಾಗಿಯೂ ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದೀಗ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನವು ಏಲಿಯನ್‌ಗಳ ಕುರಿತಾದ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದೆ. ಭೂಮಿಯ ಮೇಲೆ ರಹಸ್ಯವಾಗಿ ಮಾನವರ ನಡುವೆಯೇ ಅನ್ಯಗ್ರಹ ಜೀವಿಗಳು ವಾಸಿಸುತ್ತಿರಬಹುದು ಎಂದು ಹೇಳಿದೆ.

ಸಂಶೋಧಕರ “ಅಪರಿಚಿತ ಅಸಂಗತ ವಿದ್ಯಮಾನಗಳು” ಎಂಬ ಹೊಸ ಪ್ರಬಂಧದಲ್ಲಿ ಈ ಕುರಿತು ಬರೆಯಲಾಗಿದೆ. ಸಾಮಾನ್ಯವಾಗಿ UFOಗಳನ್ನು ಭೂಮ್ಯತೀತ ಜೀವಿಗಳು ಎಂದು ಕರೆಯಲಾಗುತ್ತದೆ,. ಇವು ಭೂಗತವಾಗಿ, ಚಂದ್ರನ ಮೇಲೆ ಅಥವಾ ಮನುಷ್ಯರ ನಡುವೆ ಇರಬಹುದು. UFOಗಳು ಅಥವಾ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳು ಭೂಮಿ ಆಧಾರಿತ ಅನ್ಯಲೋಕದ ಸ್ನೇಹಿತರನ್ನು ಭೇಟಿ ಮಾಡುವ ಅಂತರಿಕ್ಷ ನೌಕೆಗಳಾಗಿರಬಹುದು ಎಂಬ ಕಲ್ಪನೆಯನ್ನು ಸಂಶೋಧನೆ ಬಿಚ್ಚಿಟ್ಟಿದೆ.

ಈ ಅಧ್ಯಯನವು “ಕ್ರಿಪ್ಟೋಟೆರೆಸ್ಟ್ರಿಯಲ್” ಎಂದು ಕರೆಯಲ್ಪಡುವ ಪರಿಕಲ್ಪನೆಯನ್ನು ಮತ್ತಷ್ಟು ಸಂಶೋಧಿಸಿದೆ. ಈ ಜೀವಿಗಳು ನಮ್ಮ ನಡುವೆ ಮಾನವ ವೇಷದಲ್ಲಿ ವಾಸಿಸುವ, ಭೂಮಿಯ ಭವಿಷ್ಯದಿಂದ ಹುಟ್ಟಿಕೊಂಡ ಅಥವಾ ಬುದ್ಧಿವಂತ ಡೈನೋಸಾರ್‌ಗಳ ವಂಶಸ್ಥರಾಗಿರಬಹುದು ಎಂದು ಹೇಳಲಾಗ್ತಿದೆ. ಕ್ರಿಪ್ಟೋಟೆರೆಸ್ಟ್ರಿಯಲ್‌ಗಳು ನಾಲ್ಕು ರೂಪಗಳಲ್ಲಿ ಬರಬಹುದು ಎಂದು ಅಧ್ಯಯನವು ಹೇಳುತ್ತದೆ:

ಹ್ಯೂಮನ್ ಕ್ರಿಪ್ಟೋಟೆರೆಸ್ಟ್ರಿಯಲ್‌ಗಳು: ತಾಂತ್ರಿಕವಾಗಿ ಮುಂದುವರಿದ ಪ್ರಾಚೀನ ಮಾನವ ನಾಗರಿಕತೆಯು ಬಹಳ ಹಿಂದೆಯೇ ನಾಶವಾಯಿತು. ಆದರೆ ಅವಶೇಷ ರೂಪದಲ್ಲಿ ಅಸ್ತಿತ್ವದಲ್ಲಿದೆ. ಅವುಗಳನ್ನೇ ಹ್ಯೂಮನ್‌ ಕ್ರಿಪ್ಟೋಟೆರೆಸ್ಟ್ರಿಯಲ್‌ ಎಂದು ಕರೆಯಲಾಗುತ್ತದೆ.

ಹೋಮಿನಿಡ್ ಅಥವಾ ಥೆರೋಪಾಡ್ ಕ್ರಿಪ್ಟೋಟೆರೆಸ್ಟ್ರಿಯಲ್‌ಗಳು: ತಾಂತ್ರಿಕವಾಗಿ ಮುಂದುವರಿದ ಮಾನವರಲ್ಲದ ನಾಗರಿಕತೆಯು ಕೆಲವು ಭೂಮಂಡಲದ ಪ್ರಾಣಿಗಳನ್ನು ಒಳಗೊಂಡಿರುತ್ತದೆ. ಅದು ರಹಸ್ಯವಾಗಿ ವಾಸಕ್ಕೆ ವಿಕಸನಗೊಂಡಿದೆ. ಇವು ಕೋತಿಯಂತಹ ಹೋಮಿನಿಡ್ ಸಂತತಿಯಾಗಿರಬಹುದು ಅಥವಾ “ಅಜ್ಞಾತ, ಬುದ್ಧಿವಂತ ಡೈನೋಸಾರ್‌ಗಳ” ವಂಶಸ್ಥರಾಗಿರಬಹುದು.

ಹಿಂದಿನ ಭೂಮ್ಯತೀತ ಅಥವಾ ಎಕ್ಸ್‌ಟ್ರಾಟೆಂಪೆಸ್ಟ್ರಿಯಲ್ ಕ್ರಿಪ್ಟೋಟೆರೆಸ್ಟ್ರಿಯಲ್‌ಗಳು: ಈ ಜೀವಿಗಳು ಬ್ರಹ್ಮಾಂಡದ ಬೇರೆಡೆಯಿಂದ ಅಥವಾ ಮಾನವ ಭವಿಷ್ಯದಿಂದ ಭೂಮಿಗೆ ಆಗಮಿಸಿರಬಹುದು ಮತ್ತು ಚಂದ್ರನಲ್ಲಿರುವಂತಹ ರಹಸ್ಯದಲ್ಲಿ ತಮ್ಮನ್ನು ತಾವು ಮರೆಮಾಡಿಕೊಳ್ಳಬಹುದು.

ಮಾಂತ್ರಿಕ ಕ್ರಿಪ್ಟೋಟೆರೆಸ್ಟ್ರಿಯಲ್‌ಗಳು: ಇವು ಸ್ವದೇಶಿ ವಿದೇಶಿಯರಂತೆ ಕಡಿಮೆ ಮತ್ತು “ಭೂಲೋಕದ ದೇವತೆಗಳಂತೆ” ಇರುವ ಘಟಕಗಳು. ಈ ಜೀವಿಗಳು ಕಡಿಮೆ ತಾಂತ್ರಿಕ ಮತ್ತು ಹೆಚ್ಚು ಮಾಂತ್ರಿಕ ರೀತಿಯಲ್ಲಿ ಮಾನವ ಜಗತ್ತಿನೊಂದಿಗೆ ಸಂಬಂಧ ಹೊಂದಿವೆ. ಯಕ್ಷಿಣಿಯರು, ಅಪ್ಸರೆಯರು ಈ ಸಾಲಿಗೆ ಸೇರುತ್ತಾರೆ.

ಏಲಿಯನ್‌ಗಳ ಕುರಿತಾದ ವಿಜ್ಞಾನಿಗಳ ಅಧ್ಯಯನಕ್ಕೆ ಇನ್ನಷ್ಟು ಪುರಾವೆಗಳ ಅಗತ್ಯವಿದೆ. ಆಗಾಗ ಏಲಿಯನ್‌ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತವೆ. ಹಾಗಾಗಿ ಈ ಕುರಿತ ಕುತೂಹಲಗಳಿಗೆ ತೆರೆಬೀಳುತ್ತಿಲ್ಲ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...