ಸೌತ್ ಫ್ಲೋರಿಡಾದ ಮಿಯಾಮಿಯ ಮಾಲ್ ವೊಂದರಲ್ಲಿ ಏಲಿಯನ್ ಕಾಣಿಸಿಕೊಂಡಿದೆ ಎಂದು ಹೇಳಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಕಳೆದ ವಾರ ಟಿಕ್ ಟಾಕ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ 10 ಅಡಿಯ ಏಲಿಯನ್ ಎಂದು ಹೇಳಲಾಗ್ತಿದೆ.
ಆದರೆ 2024 ರ ಹೊಸ ವರ್ಷಾಚರಣೆಯಂದು ಯುವಕರು ಮಾಲ್ ನಲ್ಲಿ ಗಲಾಟೆ ನಡೆದಿದ್ದು ಪೊಲಿಸರು ಮಾಲ್ ನಲ್ಲಿ ಪರಿಶೀಲಿಸಿ ವಿಚಾರಣೆ ಮಾಡಿರುವ ವಿಡಿಯೋ ಏಲಿಯನ್ ಕಾಣಿಸಿಕೊಂಡಿರುವ ವಿಡಿಯೋ ಎಂಬ ವದಂತಿಯಿಂದ ವೈರಲ್ ಆಗಿದೆ ಎನ್ನಲಾಗಿದೆ. ವೈರಲ್ ವಿಡಿಯೋದ ಗುಣಮಟ್ಟ ಉತ್ತಮವಾಗಿಲ್ಲದ ಕಾರಣ ಇಂತಹ ವದಂತಿ ಕೇಳಿಬಂದಿದೆ.
ಇದರೊಂದಿಗೆ ಕಾಣಿಸಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿ ಮಾಲ್ ಮುಂದೆ ಪೊಲೀಸ್ ವಾಹನಗಳು ನಿಂತಿದ್ದು 2-3 ಮಂದಿ ಪೊಲೀಸ್ ಅಧಿಕಾರಿಗಳು ಒಟ್ಟಿಗೆ ನಡೆಯುವುದನ್ನ ತೋರಿಸಿದೆ. ಪೊಲೀಸರು ನಡೆಯುವಾಗಿನ ನೆರಳನ್ನ ಅನ್ಯಗ್ರಹದ ಪ್ರಾಣಿ ಕಾಣಿಸಿಕೊಂಡಿದೆ ಎಂಬ ವದಂತಿಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಬಹಳ ಮಂದಿ ಟಿಕ್‌ಟಾಕ್ ಮತ್ತು ಟ್ವಿಟರ್ ನಲ್ಲಿ ಕಡಿಮೆ ಗುಣಮಟ್ಟದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಪೊಲೀಸ್ ಕಾರುಗಳು ಮತ್ತು ಮಾಲ್ ನಡುವೆ ಅನ್ಯಲೋಕದ ಜೀವಿ ನಡೆದುಕೊಂಡು ಹೋಗುವುದನ್ನು ತೋರಿಸಿದೆ ಎಂದು ಹೇಳಿಕೊಂಡಿದ್ದಾರೆ. ವೈರಲ್ ವೀಡಿಯೊ ಬಗ್ಗೆ ನಟ ವಿಲಿಯಂ ಶಾಟ್ನರ್ ಅವರು ಟ್ವಿಟರ್ ನಲ್ಲಿ “ಹಾಗಾದರೆ ಏಲಿಯನ್ ಗಳು ಮಿಯಾಮಿಯ ಮಾಲ್‌ಗೆ ಭೇಟಿ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು ಏಲಿಯನ್ ಕಾಣಿಸಿಕೊಂಡ ವಿಷಯವನ್ನು ತಳ್ಳಿಹಾಕಿದ್ದಾರೆ.
https://twitter.com/MattFrenchArt/status/1743117174464721089?ref_src=twsrc%5Etfw%7Ctwcamp%5Etweetembed%7Ctwterm%5E1743117174464721089%7Ctwgr%5E12bcbea86294cfe8852c3b9842ada06ac189dd80%7Ctwcon%5Es1_&ref_url=https%3A%2F%2Fwww.freepressjournal.in%2Fworld%2Falien-spotted-walking-outside-mall-in-miami-as-video-of-10-foot-creature-goes-viral-heres-what-police-said