ಕಡಲತೀರಗಳಲ್ಲಿ ವಿಲಕ್ಷಣ ಜೀವಿಗಳಿರುವ ಬಗ್ಗೆ ಇಂಟರ್ನೆಟ್ ನಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತದೆ. ಇದೀಗ ಮಹಿಳೆಯೊಬ್ಬರು ನ್ಯೂಜಿಲೆಂಡ್‌ನ ನಾರ್ತ್ ಐಲ್ಯಾಂಡ್‌ನಲ್ಲಿ ಸಮುದ್ರ ಜೀವಿಗಳಿಂದ ಮುಚ್ಚಿದ ವಿಲಕ್ಷಣ ಜೀವಿಗಳನ್ನು ಗುರುತಿಸಿದ್ದಾರೆ. ಬೇ ಆಫ್ ಪ್ಲೆಂಟಿಯ ಪಾಪಮೋವಾ ಬೀಚ್‌ನಲ್ಲಿ ಬೆಳಗ್ಗಿನ ವಾಕಿಂಗ್ ಗೆ ತೆರಳಿದ್ದ ಮಹಿಳೆ, ವಿಚಿತ್ರ ಜೀವಿಗಳನ್ನು ಕಂಡು ಅಚ್ಚರಿಗೊಂಡಿದ್ದಾರೆ.
ವಿಶಿಷ್ಟ ಜೀವಿಯು 5 ಮೀಟರ್ ಉದ್ದವಿತ್ತು. ಮುಖವು ಚಿಪ್ಪುಗಳಂತಹ ವಸ್ತುವಿನಿಂದ ಮುಚ್ಚಲ್ಪಟ್ಟಿದೆ. ಇದೊಂದು ಅನ್ಯಲೋಕದ ಜೀವಿಯಂತೆ ಭಾಸವಾಗುತ್ತಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೂಡಲೇ ಭಾರಿ ವೈರಲ್ ಆಗಿದೆ.
ನೋಡಲು ಹುಳುಗಳಂತಿದ್ದು, ಚಿಪ್ಪಿನೊಳಗೆ ಗೂಡುಕಟ್ಟುವ ಜೀವಿಗಳನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಈ ಜೀವಿಗಳನ್ನು ಸಾಮಾನ್ಯವಾಗಿ ಗೂಸೆನೆಕ್ ಬಾರ್ನಾಕಲ್ಸ್ ಅನ್ನು ಲೆಪಾಸ್ ಅನಾಟಿಫೆರಾ ಎಂದೂ ಕರೆಯುತ್ತಾರೆ. ಇದನ್ನು ಪೋರ್ಚುಗಲ್ ಮತ್ತು ಸ್ಪೇನ್‌ನಲ್ಲಿ ಜನರು ವಿಶೇಷ ಖಾದ್ಯವಾಗಿ ಸವಿಯುತ್ತಾರೆ. ಇವುಗಳನ್ನು ವಿಶೇಷವಾಗಿ ಮೆಡಿಟರೇನಿಯನ್ ಪ್ರದೇಶದ ಜನರು ತಿನ್ನುತ್ತಾರೆ.
ವಿಲಕ್ಷಣವಾಗಿ ಕಾಣುವ ಈ ಅನ್ಯಗ್ರಹದಂತ ಸಮುದ್ರ ಜೀವಿಗಳು ದಡಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆಸ್ಟ್ರೇಲಿಯಾದ ಬೋಂಡಿ ಎಂಬಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಸಮುದ್ರ ತೀರಕ್ಕೆ ಬಂದವರಿಗೆ ವಿಚಿತ್ರವಾಗಿ ಕಾಣುವ ಜೀವಿಯೊಂದು ಕಣ್ಣಿಗೆ ಬಿದ್ದಿತ್ತು. ಇದು ಕೂಡ ಭಾರಿ ವೈರಲ್ ಆಗಿತ್ತು.