ತಮ್ಮ ಪತಿ ರಣಬೀರ್ ಹಾಗೂ ಪುತ್ರಿ ರಾಹಾಗೆ ಕೆಲಕಾಲ ಫೋಟೋಗ್ರಾಫರ್ ಆದ ನಟಿ ಆಲಿಯಾ ಭಟ್, ಅಪ್ಪ-ಮಗಳ ಕ್ಯೂಟ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮನೆಯ ಕಿಟಕಿಯೊಂದರ ಬಳಿ ಸ್ಟ್ರೋಲರ್ನಲ್ಲಿ ಕುಳಿತು ಮಗಳಿಗೆ ಅಪ್ಪನ ಡ್ಯೂಟಿ ಮಾಡುತ್ತಿರುವ ರಣಬೀರ್ರ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ ಆಲಿಯಾ. ಚಿತ್ರದಲ್ಲಿ ಮಗಳನ್ನು ತೋರಿಸಿಲ್ಲ.
“ನವೆಂಬರ್ 6ರ ಬಳಿಕ ನಾನು ಜಗತ್ತಿನ ಬೆಸ್ಟ್ ಫೋಟೋಗ್ರಾಫರ್ ಆಗಿದ್ದೇನೆ ಎನಿಸುತ್ತಿದೆ,” ಎಂದು ಆಲಿಯಾ ಕ್ಯಾಪ್ಷನ್ ಕೊಟ್ಟುಈ ಚಿತ್ರ ಹಂಚಿಕೊಂಡಿದ್ದಾರೆ.
ನಿರೀಕ್ಷೆಯಂತೆಯೇ ಬಿಟೌನ್ ಅನುಯಾಯಿಗಳಿಂದ ಈ ಫೋಟೋಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬರುತ್ತಿವೆ.