
ತಮ್ಮ ಮುಂಬರುವ ಸಿನಿಮಾ ಬ್ರಹ್ಮಾಸ್ತ್ರದ ನಿರ್ದೇಶಕ ಅಯಾನ್ ಮುಖರ್ಜಿ ಜೊತೆಯಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಕಾಳಿ ಪೂಜೆಯನ್ನು ಮಾಡಿದೆ.
ಹುಟ್ಟಿದ ಹಬ್ಬವೇ ಇರಲಿ ಅಥವಾ ಹಬ್ಬವೇ ಇರಲಿ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪ್ರತಿಯೊಂದು ಕ್ಷಣವನ್ನು ಸಖತ್ ಎಂಜಾಯ್ ಮಾಡುತ್ತಾರೆ. ಅದೇ ರೀತಿ ಈ ಬಾರಿಯ ದೀಪಾವಳಿಯಲ್ಲಿಯೂ ಈ ಜೋಡಿ ಮುಂಬೈನಲ್ಲಿ ಕಾಳಿ ಪೂಜೆ ನಡೆಸಿದೆ. ಇವರಿಬ್ಬರ ಆತ್ಮೀಯ ಸ್ನೇಹಿತ ಅಯಾನ್ ಮುಖರ್ಜಿ ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ನೀಲಿ ಬಣ್ಣದ ಧಿರಿಸಿನಲ್ಲಿ ಈ ಜೋಡಿ ಸಖತ್ ಕ್ಯೂಟ್ ಆಗಿ ಕಾಣ್ತಿದೆ.
ಇನ್ಸ್ಟಾಗ್ರಾಂನಲ್ಲಿ ಜೋಡಿ ಫೋಟೋವನ್ನು ಆಲಿಯಾ ಭಟ್ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದಿದೆ.
https://youtu.be/At1EbPsVlP4