ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮುದ್ದಿನ ಮಗಳು ರಾಹಾ. ಕೆಲ ದಿನಗಳ ಹಿಂದಷ್ಟೆ ರಾಹಾ ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ರು ಜೋಡಿ. ರಾಹಾ ಈಗಾಗಲೇ ಒಂದು ವರ್ಷ ಪೂರೈಸಿದ್ದಾಳೆ. ರಾಹಾ ಬಗ್ಗೆ ಆಲಿಯಾ ಮತ್ತು ರಣಬೀರ್ ಹೆಚ್ಚಿನ ಕಾಳಜಿ ತೆಗೆದುಕೊಳ್ತಾರೆ. ರಾಹಾ ಆರೋಗ್ಯ ಹಾಗೂ ಬೆಳವಣಿಗೆ ಬಗ್ಗೆ ಈಗಿನಿಂದ್ಲೇ ಹೆಚ್ಚುವರಿ ಗಮನ ಹರಿಸ್ತಿದ್ದಾರೆ ಜೋಡಿ.
ರಾಹಾ ಈಗಾಗಲೇ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದಾಳೆ. ಜೊತೆಗೆ ಮುದ್ದು ಮುದ್ದಾಗಿ ಒಂದಿಷ್ಟು ಪದಗಳನ್ನು ಹೇಳ್ತಿದ್ದಾಳೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡೋದು ಬಹಳ ಮುಖ್ಯ. ಮಗಳಿಗೆ ಬ್ರೆಸ್ಟ್ ಫೀಡ್ ಮಾಡೋದಲ್ಲದೆ ಆಲಿಯಾ ಪೌಷ್ಟಿಕ ಆಹಾರವನ್ನು ನೀಡ್ತಿದ್ದಾರೆ.
ಆಲಿಯಾ ಮಗಳಿಗಾಗಿ ಈಗಿನಿಂದ್ಲೇ ಡಯಟ್ ಪ್ಲಾನ್ ಶುರು ಮಾಡಿದ್ದಾರೆ. ಆಲಿಯಾರಂತೆ ನೀವೂ ನಿಮ್ಮ ಮಕ್ಕಳಿಗೆ ಡಯಟ್ ಚಾರ್ಟ್ ಮಾಡೋದಾದ್ರೆ ಇದನ್ನು ಫಾಲೋ ಮಾಡಿ.
ಆಲಿಯಾರಂತೆ ಮಕ್ಕಳಿಗೆ ಹಾಲು, ಬೆಣ್ಣೆ, ಮೊಸರು ಸೇರಿದಂತೆ ಡೈರಿ ಆಹಾರವನ್ನು ತಪ್ಪದೆ ನೀಡಿ. ಒಂದು ವರ್ಷವಾಗ್ತಿದ್ದ ಮಕ್ಕಳಿಗೆ ಹಲ್ಲು ಬರಲು ಶುರುವಾಗೋದ್ರಿಂದ ಬೇಳೆಕಾಳುಗಳ ನೀರು, ಕಡಲೆಕಾಳು, ರಾಜ್ಮಾ ಸೇರಿದಂತೆ ಪೋಷಕಾಂಶವಿರುವ ಆಹಾರ ನೀಡಬೇಕಾಗುತ್ತದೆ. ಅಲ್ಲದೆ ನೀವು ಈ ಸಮಯದಲ್ಲಿ ಮಕ್ಕಳಿಗೆ ಬೇಯಿಸಿದ ತರಕಾರಿ ನೀರು ಅಥವಾ ತರಕಾರಿಯನ್ನು ನೀಡಬೇಕು. ಋತುವಿಗೆ ತಕ್ಕಂತೆ ಸಿಗುವ ಹಣ್ಣುಗಳನ್ನು ಮಕ್ಕಳಿಗೆ ನೀಡೋದು ಉತ್ತಮ.
ಈ ವಯಸ್ಸಿನ ಮಕ್ಕಳಿಗೆ ಮೂರು ಹೊತ್ತು ಸ್ಮ್ಯಾಶ್ ಮಾಡಿದ ತರಕಾರಿ, ಬೇಳೆಯ ರಸವನ್ನು ನೀವು ನೀಡ್ಬೇಕು. ಜೊತೆಗೆ ಹಣ್ಣು, ಹಾಲನ್ನು ನೀಡಬೇಕು. ಆದ್ರೆ ಅತಿ ಹೆಚ್ಚು ಮಸಾಲೆಯಿರುವ, ಅತಿ ಸಿಹಿಯಾದ ಆಹಾರ, ಜಂಕ್ ಫುಡ್, ಕೇಕ್, ಚಾಕೋಲೇಟ್, ಚಿಪ್ಸ್ ನೀಡದಿರುವುದು ಒಳ್ಳೆಯದು.