ಪರಿಪೂರ್ಣವಾದ ಸಾಹಿತ್ಯ ಮತ್ತು ಲಯದೊಂದಿಗೆ ಉತ್ತಮ ಹಾಡನ್ನು ಕೇಳಿದ ನಂತರ, ಹಾಡು ನಿಮ್ಮ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಅಂಥದ್ದೇ ಒಂದು ಹಾಡು ಎಂದರೆ ಅಲಿ ಜಾಫರ್ ಜೂಮ್ ಅವರದ್ದು. ಈ ಹಾಡಿನ ಬಿಡುಗಡೆಯಾಗಿ ಒಂದು ದಶಕವಾದರೂ ಇದರ ಕ್ರೇಜ್ ಇನ್ನೂ ಮುಗಿದಿಲ್ಲ.
ಕುತೂಹಲದ ಘಟನೆಯೊಂದರಲ್ಲಿ ಭೌತಶಾಸ್ತ್ರ ಪರೀಕ್ಷೆಯ ಉತ್ತರ ಪತ್ರಿಕೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಉತ್ತರದ ಜಾಗದಲ್ಲಿ ಅಲಿ ಜಾಫರ್ ಅವರು ಹಾಡು ಬರೆದಿದ್ದಾನೆ. ಪಾಕಿಸ್ತಾನಿ ಶಿಕ್ಷಕಿಯೊಬ್ಬರು ಇದನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಶಿಕ್ಷಕರು ವಿದ್ಯಾರ್ಥಿಯೊಬ್ಬ ಬರೆದ ಉತ್ತರ ಪತ್ರಿಕೆಗಳ ಬಗ್ಗೆ ವಿವರಿಸಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಉತ್ತರ ಬರದಿದ್ದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮಗೆ ಅನ್ನಿಸಿದ್ದನ್ನು ಬರೆದು ತುಂಬಿಸುತ್ತಾರೆ. ಆದರೆ ಈ ವಿದ್ಯಾರ್ಥಿ ಇನ್ನೂ ಮುಂದಕ್ಕೆ ಹೋಗಿ ಜಾಫರ್ ಅವರ ಜೂಮ್ ಹಾಡಿನ ಸಾಹಿತ್ಯ ಬರೆದಿರುವುದಾಗಿ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ಜಾಫರ್ ಅವರು, ನನ್ನ ಹಾಡುಗಳಲ್ಲಿ ಭೌತಶಾಸ್ತ್ರವನ್ನು ಹುಡುಕಬೇಡಿ ಎಂದು ನಾನು ನನ್ನ ವಿದ್ಯಾರ್ಥಿಗಳಲ್ಲಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.