ರಷ್ಯಾದ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾದ ಅಲೆಕ್ಸಿ ನವಲ್ನಿ ಅವರನ್ನು “ಕೊಲೆ” ಮಾಡಲಾಗಿದೆ ಎಂದು ಅವರ ವಕ್ತಾರ ಕಿರಾ ಯರ್ಮಿಶ್ ಹೇಳಿದ್ದಾರೆ.
ಫೆಬ್ರವರಿ 17 ರ ಶನಿವಾರದಂದು X(ಹಿಂದೆ ಟ್ವಿಟರ್) ಪೋಸ್ಟ್‌ಗಳ ಸರಣಿಯಲ್ಲಿ, ಅಲೆಕ್ಸಿ ನವಲ್ನಿ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸುವುದನ್ನು ತಪ್ಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಕಿರಾ ಯರ್ಮಿಶ್ ಆರೋಪಿಸಿದ್ದಾರೆ.
ಯಮಲೋ-ನೆನೆಟ್ಸ್ ಜಿಲ್ಲೆಯ ಜೈಲಿನ ಅಧಿಕಾರಿಗಳು ಫೆಬ್ರವರಿ 16 ರಂದು ನವಲ್ನಿ ಅವರ ಸಾವಿನ ಬಗ್ಗೆ ಘೋಷಿಸಿದ್ದರು.
ನವಲ್ನಿ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಯರ್ಮಿಶ್ ಪೋಸ್ಟ್ ಮಾಡಿದ್ದಾರೆ. ಅಲೆಕ್ಸಿ ನವಲ್ನಿಯನ್ನು ಕೊಲೆ ಮಾಡಲಾಗಿದೆ. ಅವರ ಸಾವು ಫೆಬ್ರವರಿ 16 ರಂದು ಸ್ಥಳೀಯ ಸಮಯ ಮಧ್ಯಾಹ್ನ 2:17 ಕ್ಕೆ ಸಂಭವಿಸಿದೆ ಎಂದು ಅಲೆಕ್ಸಿ ಅವರ ತಾಯಿಗೆ ಅಧಿಕೃತ ಸಂದೇಶದಲ್ಲಿ ತಿಳಿಸಲಾಗಿದೆ. ನವಲ್ನಿಯ ದೇಹವು ಈಗ ಸಲೇಖಾರ್ಡ್‌ನಲ್ಲಿದೆ. ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕುಟುಂಬದವರಿಗೆ ಮೃತದೇಹ ನೀಡದಿರಲು ಪ್ರಯತ್ನ ನಡೆಸಲಾಗಿದೆ ಎಂದು ದೂರಿದ್ದಾರೆ.
ನವಲ್ನಿ ಅವರ ದೇಹವನ್ನು ಅವರ ಕುಟುಂಬಕ್ಕೆ ನೀಡುವುದನ್ನು ವಿಳಂಬ ಮಾಡಲು ಅಥವಾ ನೀಡದಿರಲು ರಷ್ಯಾದ ಅಧಿಕಾರಿಗಳು ವಿಭಿನ್ನ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಯರ್ಮಿಶ್ ಆರೋಪಿಸಿದ್ದಾರೆ.