2021 ಮುಗಿಯಲು ಇನ್ನು ಕೆಲವೇ ದಿನಗಳ ಬಾಕಿಯಿದೆ. ವರ್ಷದ ಕೊನೆ ತಿಂಗಳು ಡಿಸೆಂಬರ್ ಮುಗಿಯುತ್ತಿದ್ದಂತೆ ಹೊಸ ವರ್ಷ ಆರಂಭವಾಗಲಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸೇರಿದಂತೆ ಅನೇಕ ಕೆಲಸಗಳನ್ನು ಡಿಸೆಂಬರ್ 31 ರೊಳಗೆ ಮಾಡಬೇಕಿದೆ.
2020-21 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಡಿಸೆಂಬರ್ 31 ಕೊನೆ ದಿನವಾಗಿದೆ. ಒಂದು ವೇಳೆ ಈ ದಿನಾಂಕದೊಳಗೆ ತೆರಿಗೆ ಸಲ್ಲಿಸದೆ ಹೋದಲ್ಲಿ ದಂಡ ವಿಧಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರೆ, ನೋಟಿಸ್ ಭಯವಿರುವುದಿಲ್ಲ.
ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ, ಎಲ್ಲಾ ಪಿಎಫ್ ಖಾತೆದಾರರಿಗೆ ನಾಮಿನಿ ಹೆಸರು ಸೇರಿಸಲು ಸೂಚನೆ ನೀಡಿದೆ. ಇಪಿಎಫ್ಒ ಡಿಸೆಂಬರ್ 31, 2021 ರೊಳಗೆ ನಾಮಿನಿ ಹೆಸರು ಸೇರಿಸಲು ಸೂಚಿಸಿದೆ. ಡಿಸೆಂಬರ್ 31 ರೊಳಗೆ ಪಿಎಫ್ ಖಾತೆಗೆ ನಾಮಿನಿ ಹೆಸರು ಸೇರಿಸದಿದ್ದರೆ, ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ತಿಂಗಳ ಅಂತ್ಯದೊಳಗೆ ಆಡಿಟ್ ವರದಿಯನ್ನು ಸಲ್ಲಿಸುವುದು ಸಹ ಕಡ್ಡಾಯವಾಗಿದೆ. ವಾರ್ಷಿಕ ಆದಾಯ 10 ಕೋಟಿ ರೂಪಾಯಿಗಿಂತ ಹೆಚ್ಚಿರುವ ಉದ್ಯಮಿಗಳು ಆದಾಯ ತೆರಿಗೆ ರಿಟರ್ನ್ ಜೊತೆಗೆ ಆಡಿಟ್ ವರದಿಯನ್ನು ಸಲ್ಲಿಸಬೇಕು.