ಬೆಂಗಳೂರು : ಹೃದಯಾಘಾತವು ಸೈಲೆಂಟ್ ಕಿಲ್ಲರ್ ಆಗುತ್ತಿದೆ. ವಾಸ್ತವವಾಗಿ, ಹೃದಯಾಘಾತವು ಮಾರಣಾಂತಿಕ ವೈದ್ಯಕೀಯ ಸ್ಥಿತಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಪ್ರತಿ ವರ್ಷ 17.9 ಮಿಲಿಯನ್ ಜನರು ಹೃದಯರಕ್ತನಾಳದ ಕಾಯಿಲೆಗಳಿಂದ ಸಾಯುತ್ತಾರೆ.
ಯಾವುದೇ ಕ್ಷಣದಲ್ಲಿ ನಿಮಗೆ ಕುತ್ತಿಗೆ ನೋವು, ದವಡೆ ನೋವು, ವಾಂತಿ, ಬೆವರು, ಆಯಾಸ, ಅಜೀರ್ಣ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ
ಎದೆ ನೋವು ಅಥವಾ ಎದೆ ಉರಿ ಸಮಸ್ಯೆ ಬಂದಾಗ ಪಿತ್ತ ಅಥವಾ ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ
ಒತ್ತಡದ ಬದುಕಿನ ನಡುವೆಯೂ ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿಕೊಳ್ಳುವ ಮೂಲಕ ನಿಮ್ಮ ಹೃದಯದ ಕಾಳಜಿ ವಹಿಸಿ
ಎದೆನೋವು ಬಂದಾಗ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ
ಎದೆನೋವು ಅಥವಾ ಹೃದಯಾಘಾತಕ್ಕೆ ಸಂಬಂಧಿಸಿ ಯಾವುದೇ ಲಕ್ಷಣಗಳು ಕ೦ಡುಬ೦ದಲ್ಲಿ ತಕ್ಷಣವೇ ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ತಿಳಿಸಿ
ಪ್ರಮುಖ ಲಕ್ಷಣಗಳು
ಎದೆ ನೋವು
ಭಾರವಾದ ಭಾವನೆ
ವೇಗದ ಹೃದಯ ಬಡಿತ
ಉಸಿರಾಟದ ತೊಂದರೆ
ಎದೆಯುರಿ
ದಣಿವು
ನಿದ್ರೆಯ ಸಮಸ್ಯೆಗಳು
ಒತ್ತಡದ ಬದುಕಿನ ನಡುವೆಯೂ ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿಕೊಳ್ಳುವ ಮೂಲಕ ನಿಮ್ಮ ಹೃದಯದ ಕಾಳಜಿ ವಹಿಸಿ.#HealthForAll @CMofKarnataka @siddaramaiah @dineshgrao pic.twitter.com/sZs0NwN1D0
— DIPR Karnataka (@KarnatakaVarthe) November 11, 2024