ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 30, 2021 ರ ಮೊದಲು ಗ್ರಾಹಕರು, ಖಾತೆ ಸಂಖ್ಯೆಗೆ ಆಧಾರ್ ಲಿಂಕ್ ಮಾಡಬೇಕೆಂದು ಎಸ್ಬಿಐ ಸೂಚನೆ ನೀಡಿದೆ. ಒಂದು ವೇಳೆ ಆಧಾರ್ ಲಿಂಕ್ ಆಗದೆ ಹೋದಲ್ಲಿ ಬ್ಯಾಂಕ್ ಸೇವೆಗಳನ್ನು ಪಡೆಯಲು ಕಷ್ಟವಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.
ಇದೇ ವೇಳೆ ಪಾನ್ ಕಾರ್ಡ್-ಆಧಾರ್ ಲಿಂಕ್ ಗೆ ಸೆಪ್ಟೆಂಬರ್ 30 ಕೊನೆ ದಿನ. ಒಂದು ವೇಳೆ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ನಿಯಮ ಮುರಿದಲ್ಲಿ ಆದಾಯ ತೆರಿಗೆ ಕಾಯಿದೆಯಡಿ 1000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
ಆಧಾರ್-ಪಾನ್ ಸಂಖ್ಯೆ ಲಿಂಕ್ ಆಗಿದೆಯಾ ಎಂಬುದನ್ನು ಆದಾಯ ತೆರಿಗೆ ವೆಬ್ಸೈಟ್ ನಲ್ಲಿ ನೋಡಬೇಕು. ಆದಾಯ ತೆರಿಗೆ ವೆಬ್ ಸೈಟ್ ಗೆ ಹೋಗಿ, ಆಧಾರ್ ಕಾರ್ಡ್ ದಾರರ ಹೆಸರು, ಪಾನ್ ಸಂಖ್ಯೆ, ಆಧಾರ್ ಸಂಖ್ಯೆ ನಮೂದಿಸಬೇಕು. ಇದರ ನಂತರ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ. ಪಾನ್, ಆಧಾರ್‌ನೊಂದಿಗೆ ಲಿಂಕ್ ಆಗುತ್ತದೆ.
ಎಸ್ಎಂಎಸ್ ಮೂಲಕವೂ ಪಾನ್-ಆಧಾರ್ ಲಿಂಕ್ ಮಾಡಬಹುದು. ಫೋನಿನಲ್ಲಿ ಯುಐಡಿಪಿಎಎನ್ ಎಂದು ಟೈಪ್ ಮಾಡಬೇಕು. ಇದರ ನಂತರ, 12-ಅಂಕಿಯ ಆಧಾರ್ ಸಂಖ್ಯೆ ಮತ್ತು 10-ಅಂಕಿಯ ಪಾನ್ ಸಂಖ್ಯೆಯನ್ನು ನಮೂದಿಸಬೇಕು. ಇದನ್ನು 567678 ಅಥವಾ 56161 ಗೆ ಕಳುಹಿಸಬೇಕು.