ಬೆಂಗಳೂರು: ಶಾದಿ ಡಾಟ್ ಕಾಂನಲ್ಲಿ ಮದುವೆಯ ಪ್ರಪೋಸಲ್ ಕಳಿಸುವವರೇ ಎಚ್ಚರ, ಶಾದಿ ಡಾಟ್ ಕಾಂ ನಲ್ಲಿ ಯುವತಿಯ ನಕಲಿ ಫೋಟೋ ಹಾಕಿ ಯುವಕರ ಗ್ಯಾಂಗ್ ವೊಂದು ವ್ಯಕ್ತಿಯೊಬ್ಬರಿಗೆ 6 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ.
ಪೀಣ್ಯಾದ ಶಿವಪುರದ ರಾಬರ್ಟ್ ವರ್ಗಿಸ್ ವಂಚನೆಗೊಳಗಾದ ವ್ಯಕ್ತಿ. ಶಾದಿ ಡಾಟ್ ಕಾಂ ನಲ್ಲಿ ಯುವತಿಯ ನಕಲಿ ಫೋಟೋ ಹಾಕಿ ರಾಬರ್ಟ್ ಗೆ ವಂಚಿಸಿದ್ದಾರೆ. ಕರೆ ಮಾಡಿದ ಯುವತಿಯೊಬ್ಬಳು ನಾನು ಕಾರು ಚಾಲನೆ ಮಾಡಿಕೊಂಡು ಬರುವಾಗ ಅಪಘಾತಕ್ಕೀಡಾಗಿದ್ದು, ಪೊಲೀಸರು ತನ್ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೇಸ್ ಮುಕ್ತಗೊಳಿಸಲು ಹಣದ ಅಗತ್ಯವಿದೆ. ಹೀಗಾಗಿ ನಾನು ಹೇಳಿದ ವ್ಯಕ್ತಿಗೆ ಹಣ ಹಾಕುವಂತೆ ಹೇಳಿದ್ದಾಳೆ.
ಅದರಂತೆ ರಾಬರ್ಟ್ ವರ್ಗಿಸ್ ಆರೋಪಿ ಮುಜೀಬ್ ನ ಎಸ್ ಬ್ಯಂಕ್ ಅಕೌಂಟ್, ಐಡಿಬಿಐ ಅಕೌಂಟ್ ಗೆ 6 ಲಕ್ಷ ರೂಪಾಯಿ ಹಾಕಿದ್ದಾರೆ. ಮತ್ತೋರ್ವ ಆರೋಪಿ ಶಿವಮಧು ಅಕೌಂಟ್ ಗೆ 25 ಸಾವಿರ ರೂಪಾಯಿ ಹಾಕಿದ್ದಾರೆ. ಗುರುತು ಮರೆ ಮಾಚಿದ ಆರೋಪಿಗಳು ಹಣ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದಾರೆ.
ಯುವತಿ ಆಲೋಶಿಯಾ, ಮುಜೀಬ್, ಶಿವವಧು ವಿರುದ್ಧ ರಾಬರ್ಟ್ ವರ್ಗಿಸ್ ಪೀಣ್ಯ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ.