ತೆಲಂಗಾಣ : ಮೊಬೈಲ್ ಚಾರ್ಜರ್ ಅಗಿದು 1 ವರ್ಷದ ಕಂದಮ್ಮ ಮಗು ಮೃತಪಟ್ಟ ಘಟನೆ ನಿರ್ಮಲ್ ಜಿಲ್ಲೆಯ ಕಡೇಮ್ ಮಂಡಲದ ಕೋಥಾ ಮಡ್ಡಿಪದಗಾದಲ್ಲಿ ನಡೆದಿದೆ.
ಸೆಲ್ ಫೋನ್ ಚಾರ್ಜರ್ ದುರ್ಗಾಂ ಆರಾಧ್ಯ ಎಂಬ ಮಗುವಿನ ಜೀವವನ್ನು ತೆಗೆದುಕೊಂಡಿದೆ. ಮೊಬೈಲ್ ಚಾರ್ಜರ್ ಹಾಕಿದ ಬಳಿಕ ಪೋಷಕರು ಕರೆಂಟ್ ಪ್ಲಗ್ ನಿಂದ ಚಾರ್ಜರ್ ತೆಗೆದಿರಲಿಲ್ಲ. ನಂತರ ಮಗು ಸೆಲ್ ಫೋನ್ ಚಾರ್ಜರ್ ಕೇಬಲ್ ನೊಂದಿಗೆ ಆಟವಾಡುತ್ತಿತ್ತು ಮತ್ತು ಅದನ್ನು ಬಾಯಿಯಲ್ಲಿ ಇಟ್ಟುಕೊಂಡಿದೆ.
ವಿದ್ಯುತ್ ಶಾಕ್ ನಿಂದ ನಿತ್ರಾಣಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.