ಬೆಂಗಳೂರು : ಚಳಿಗಾಲದಲ್ಲಿ ಎಷ್ಟು ಎಚ್ಚರ ಇದ್ದರೂ ಸಾಲದು, ವಿವಿಧ ರೀತಿಯ ರೋಗಗಳು ನಮ್ಮನ್ನು ಕಾಡಲು ಶುರುವಾಗುತ್ತದೆ. ಈ ವರ್ಷ ಹೆಚ್ಚಿನ ಮಕ್ಕಳು ಮಂಫ್ಸ್ ಸೋಂಕಿಗೆ ತುತ್ತಾಗಿದ್ದಾರೆ.
ಮಂಫ್ಸ್ ಇದನ್ನು ಕೆಪ್ಪಟೆ ಅಥವಾ ಮಂಗನ ಬಾವು ಅಂತ ಕರೆಯುತ್ತಾರೆ. ಕೆಪ್ಪಟೆಯ ವಿಶಿಷ್ಟ ಲಕ್ಷಣವೆಂದರೆ ಪರಿಣಾಮವಾಗಿ ಕೆನ್ನೆ ಊದಿಕೊಳ್ಳುತ್ತದೆ. ಇತರ ಸಾಮಾನ್ಯ ರೋಗ ಲಕ್ಷಣಗಳೆಂದರೆ ಜ್ವರ, ತಲೆ ನೋವು, ಸ್ನಾಯು ನೋವು, ಆಯಾಸ ಮತ್ತುಆಹಾರ ನುಂಗಲು ತೊಂದರೆಯಾಗುವುದು.
ಮಂಗನ ಬಾವು ಅಥವಾ ಕೆಪ್ಪಟ ಮಮ್ಸ್ ಎಂಬ ವೈರಾಣುಗಳಿಂದ ಈ ರೋಗ ಬರುತ್ತದೆ. ಪ್ಯಾರೊಟಿಡ್ ಗ್ರಂಥಿಗಳನ್ನು ದೊಡ್ಡದಾಗಿಸುವ ಮೂಲಕ ತೀವ್ರ ನೋವನ್ನುಂಟು ಮಾಡುತ್ತದೆ . ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ಮಗು, ವ್ಯಕ್ತಿಯ ಸಂಪರ್ಕದಿಂದಾಗಿ ಇನ್ನೊಬ್ಬರಿಗೆ ಹರಡುತ್ತದೆ. ದೈಹಿಕ ಸ್ಪರ್ಶ,ಎಂಜಲು,ಉಸಿರಾಟದಿಂದ ಇನ್ನೊಬ್ಬರಿಗೆ ಹರಡುತ್ತದೆ.
ರೋಗ ಲಕ್ಷಣಗಳು
ಜ್ವರ
ತಲೆನೋವು
ಸ್ನಾಯು ನೋವು ಅಥವಾ ನೋವು
ತಿನ್ನಲು ಬಯಸುವುದಿಲ್ಲ
ದಣಿವು
ಮುಂದಿನ ಕೆಲವು ದಿನಗಳಲ್ಲಿ ರೋಗಲಕ್ಷಣಗಳು ಈ ಕೆಳಗಿನವುಗಳಿಗೆ ಬದಲಾಗಬಹುದು
ಎರಡೂ ಗ್ರಂಥಿಗಳಲ್ಲಿ ಅಥವಾ ಮುಖದ ಎರಡೂ ಬದಿಗಳಲ್ಲಿ ಊತ
ಊತದ ಸುತ್ತಲೂ ನೋವು
ಆಗಾಗ್ಗೆ ಬಾಯಿಯ ನೆಲದ ಕೆಳಗಿರುವ ಗ್ರಂಥಿಗಳಲ್ಲಿ ಊತ ಉಂಟಾಗಬಹುದು
ಪರಿಹಾರ
1) ಚಳಿ ಗಾಲದಲ್ಲಿ ಸಾಧ್ಯವಾದಷ್ಟು ಬಿಸಿಯಾದ ಆಹಾರ, ಕುದಿಸಿದ ನೀರು ಸೇವಿಸಬೇಕು
2) ಕೆಪ್ಪಟೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಎಂಎಂಆರ್ (ದಡಾರ, ಮಂಗನ ಬಾವು ಮತ್ತು ರುಬೆಲ್ಲಾ) ಲಸಿಕೆ ಕೆಪ್ಪಟೆಯ ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗಿದೆ.
3) ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗಂಭೀರವಾದ ಕಾಯಿಲೆಯಲ್ಲ. ಮೂರ್ನಾಲ್ಕು ದಿನದಲ್ಲಿ ಕಡಿಮೆಯಾಗುತ್ತದೆ