ಕರೆ ಮಾಡುವವರಿಗೆ ಅಥವಾ ಸ್ವೀಕರಿಸುವವರಿಗೆ ತಿಳಿಸದೆ ವ್ಯಕ್ತಿಯ ಕರೆಯನ್ನು ರೆಕಾರ್ಡ್ ಮಾಡುವುದು ಗೌಪ್ಯತೆ ಹಕ್ಕುಗಳ ಉಲ್ಲಂಘನೆಯಾಗಿದೆ. ಆದರೆ ಇದರ ನಂತರವೂ, ಕರೆ ರೆಕಾರ್ಡಿಂಗ್ ಮಾಡಲಾಗುತ್ತದೆ.
ಅನೇಕರು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಸಹಾಯದಿಂದ ಕರೆಗಳನ್ನು ಸಹ ರೆಕಾರ್ಡ್ ಮಾಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕರೆ ಸಮಯದಲ್ಲಿ ಅನೇಕ ಬಾರಿ ಫೋನ್ ಬೀಪ್ ಆಗುತ್ತದೆ. ಅಂದರೆ ನೀವು ಪ್ರತಿಯೊಂದು ಪ್ರತಿಕ್ರಿಯೆಗೆ ಗಮನ ನೀಡಬೇಕು.
ನಿಮ್ಮ ಜೊತೆ ಫೋನ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಕಡಿಮೆ ಮಾತನಾಡುತ್ತಿದ್ದರೆ ನೀವು ಜಾಗರೂಕರಾಗಿರಬೇಕು.
ಇತ್ತೀಚೆಗೆ, ಗೂಗಲ್ ಮತ್ತು ಪ್ಲೇ ಸ್ಟೋರ್ನಲ್ಲಿ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ ಗಳನ್ನು ಕೂಡ ಬಂದ್ ಮಾಡಲಾಗಿದೆ. ಫೋನ್ ಕರೆಯ ಮಧ್ಯದಲ್ಲಿ ನಿಮಗೆ ಬೀಪ್ ಶಬ್ದ ಕೇಳಿದರೆ, ತಕ್ಷಣ ಎಚ್ಚತ್ತುಕೊಳ್ಳಿ…ಆ ವ್ಯಕ್ತಿ ರೆಕಾರ್ಡ್ ಮಾಡುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಿ.
ಇದು ವರ್ಕೌಟ್ ಆಗದಿದ್ದಾಗ ಜನರು ಫೋನ್ ಸ್ಪೀಕರ್ ಲ್ಲಿ ಹಾಕುವ ಮೂಲಕ ಮತ್ತೊಂದು ಫೋನ್ ಮೂಲಕ ಕರೆಯನ್ನು ರೆಕಾರ್ಡ್ ಮಾಡುತ್ತಾರೆ. ಅವರು ಲೌಡ್ ಸ್ಪೀಕರ್ ಆನ್ ಮಾಡಿದಾಗ ಧ್ವನಿಯ ಕ್ಲಾರಿಟಿ ಇರಲ್ಲ, ಅವರ ಧ್ವನಿ ನಿಧಾನವಾಗಿ ಕೇಳಿಸುತ್ತದೆ. ಅಂತಹ ಸಮಯದಲ್ಲಿ ರೆಕಾರ್ಡ್ ಮಾಡಲಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಿ.