ಬೆಂಗಳೂರು : ಹೆಚ್ಐವಿ ಎಂಬುದು ಒಂದು ವೈರಸ್ ಆಗಿದೆ. ಸರಿಯಾದ ಸಮಯಕ್ಕೆ ಎಚ್ಐವಿ ಪಾಸಿಟಿವ್ ಆಗಿರುವುದನ್ನು ಪತ್ತೆಹಚ್ಚಿ ನಿಯಮಿತವಾಗಿ ಚಿಕಿತ್ಸೆ ನೀಡಿದರೆ ಮುಂದೆ ಏಡ್ಸ್ ರೋಗವಾಗಿ ಉಲ್ಬಣಗೊಳ್ಳುವುದನ್ನು ತಪ್ಪಿಸಬಹುದಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಹೆಚ್.ಐ.ವಿ. ಸೋಂಕು ಹರಡುವುದು ಹೇಗೆ?
ಹೆಚ್.ಐ.ವಿ. ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ
ಹೆಚ್.ಐ.ವಿ. ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದರಿ೦ದ
ಹೆಚ್.ಐ.ವಿ. ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆಯಲ್ಲಿ ಅಥವಾ ಎದೆ ಹಾಲುಣಿಸುವ ಮೂಲಕ
ಹೆಚ್.ಐ.ವಿ. ಸೋಂಕಿತ ವ್ಯಕ್ತಿಗೆ ಬಳಸಿದ ಸೂಜಿ, ಸಿರಿಂಜು ಸಂಸ್ಕರಿಸದೇ ಬಳಸುವುದರಿಂದ
ಹೆಚ್.ಐ.ವಿ. ಬಗ್ಗೆ ಎಚ್ಚರಿಕೆಯಿಂದಿರಿ. ನಿಮಗೆ ಅನುಮಾನವಿದ್ದಲ್ಲಿ ಹೆಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಿ.
ಹೆಚ್.ಐ.ವಿ. ಸೋಂಕಿತರಿಗೆ ಬದುಕುವ ಹಕ್ಕಿದೆ. ತಾರತಮ್ಯ ಮಾಡಬೇಡಿ. ಗೌರವ, ಪ್ರೀತಿ, ಮಮತೆ ಜೊತೆಗೆ ನೆರವು, ಸಹಕಾರ, ಬೆಂಬಲ ನೀಡಿ.ಹೆಚ್.ಐ.ವಿ. / ಏಡ್ಸ್ ಸಂಬಂಧಿತ ತಾರತಮ್ಯ ದೂರುಗಳಿದ್ದಲ್ಲಿ ombudsman.hiv@karnataka.gov.in ಕೂಡಲೇ ಸಂಪರ್ಕಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಹೆಚ್.ಐ.ವಿ. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್.ಐ.ವಿ. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೆತ್ತವರಿಂದ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಪ್ರಸವ ಸಮಯದಲ್ಲಿ ಮತ್ತು ಎದೆಹಾಲು ಉಣಿಸುವಿಕೆ ಸಂದರ್ಭದಲ್ಲಿ ಹರಡಬಹುದು.. ರಕ್ತದ ಮೂಲಕ ಎಚ್.ಐ.ವಿ. ಸೋಂಕಿತ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ಸ್ವೀಕರಿಸುವುದರಿಂದ ಹರಡಬಹುದು. ೪. ಸೋಂಕಿತ ವ್ಯಕ್ತಿಯೊಂದಿಗೆ ಸೂಜಿ, ಸಿರಿಂಜುಗಳನ್ನು ಹಂಚಿಕೊಳ್ಳುವುದರಿಂದ ಎಚ್.ಐ.ವಿ. ಹರಡಬಹುದು. ನಮ್ಮ ದೇಹದಲ್ಲಿ ಸಿ.ಡಿ. 4 ಎಂಬ ಒಂದು ರೀತಿಯ ಜೀವಕೋಶಗಳಿರುತ್ತವೆ. ಈ ರೀತಿಯ ಜೀವಕೋಶಗಳು ನಮ್ಮನ್ನು ವಿವಿಧ ಸೋಂಕುಗಳಿಂದ ಸಂರಕ್ಷಿಸುತ್ತವೆ ಮತ್ತು ಸ್ವಾಭಾವಿಕವಾದ ಇಮ್ಯೂನಿಟಿ ಅಥವಾ ರೋಗನಿರೋಧಕ ಶಕ್ತಿಯನ್ನು ಕೊಡುತ್ತವೆ. ಯಾವಾಗ ಎಚ್.ಐ.ವಿ. ನಮ್ಮ ದೇಹವನ್ನು ಪ್ರವೇಶಿಸುತ್ತವೆಯೋ, ಆಗ ಅದು ಸಿಡಿ 4 ಜೀವಕೋಶಗಳನ್ನು ನಾಶ ಪಡಿಸುತ್ತದೆ ಮತ್ತು ನಮ್ಮನ್ನು ಹೆಚ್ಚು ಸೋಂಕುಗಳ ಅಪಾಯಕ್ಕೆ ಗುರಿ ಮಾಡುತ್ತದೆ.