ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗ್ತಿದೆ. ಇದು ಎಲ್ಲರ ಭಯಕ್ಕೆ ಕಾರಣವಾಗಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ಜೋರಾಗಿ ನಡೆದಿದೆ. ಕೊರೊನಾ ಎರಡು ಡೋಸ್ ತೆಗೆದುಕೊಂಡವರು ಸಂಪೂರ್ಣ ಸುರಕ್ಷಿತರು ಎಂದಲ್ಲ. ಕೊರೊನಾ ಲಸಿಕೆ ನಂತ್ರವೂ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.
ದಿ ಲ್ಯಾನ್ಸೆಟ್ ನಡೆಸಿದ ಸಂಶೋಧನೆ ಪ್ರಕಾರ, ಕೊರೊನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಜನರು ಸಹ ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಅವರು ಮನೆಯ ಸದಸ್ಯರಿಗೆ ಶೇಕಡಾ 38ರಷ್ಟು ಸೋಂಕು ಹರಡುವ ಸಾಧ್ಯತೆಯಿದೆ. ಕೊರೊನಾದ ಎರಡು ಡೋಸ್, ಇಡೀ ಮನೆಯವರು ಪಡೆದಿದ್ದರೆ, ಸೋಂಕು ಹರಡುವ ಅಪಾಯ ಶೇಕಡಾ 38ರ ಬದಲು ಶೇಕಡಾ 25ರಷ್ಟಿರಲಿದೆ ಎನ್ನಲಾಗ್ತಿದೆ.
ಸೆಪ್ಟೆಂಬರ್ 2020 ರಿಂದ ಸೆಪ್ಟೆಂಬರ್ 2021 ರವರೆಗೆ ಲಂಡನ್ ಮತ್ತು ಬೋಲ್ಟನ್‌ನಲ್ಲಿ ಒಟ್ಟು 440 ಕುಟುಂಬಗಳನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡ ಜನರು ಕೊರೊನಾ ಸೋಂಕಿಗೆ ಒಳಗಾಗುವ ಅಪಾಯ ತುಂಬಾ ಕಡಿಮೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.
ಆದರೆ ಇದು ಸಂಪೂರ್ಣ ರಕ್ಷಣೆ ನೀಡುವುದಿಲ್ಲ. ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಪ್ರೊಫೆಸರ್ ಅಜಿತ್ ಲಾಲ್ವಾನಿ ಅವರು ಲಸಿಕೆ ಎರಡೂ ಡೋಸ್‌ಗಳನ್ನು ಪಡೆದವರೂ ಸೋಂಕಿಗೆ ಒಳಗಾಗುತ್ತಿದ್ದಾರೆ.
ಚಳಿಗಾಲದಲ್ಲಿ ಕೊರೊನಾ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಚಳಿಗಾಲದಲ್ಲಿ ಹೆಚ್ಚಿನ ಜನರು ಮನೆಯೊಳಗೆ ಇರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಪರಸ್ಪರ ಕೊರೊನಾ ಸೋಂಕು ಹರಡುವ ಅಪಾಯವೂ ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ, ಮನೆಯ ಪ್ರತಿಯೊಬ್ಬ ಸದಸ್ಯರು ಕೊರೊನಾ ಲಸಿಕೆ ಪಡೆಯುವುದು ಅವಶ್ಯಕ ಎಂದು ತಜ್ಞರು ಹೇಳಿದ್ದಾರೆ.