ಮೂಡು ಬಿದರೆ : ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಯುವಕ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ಕೋಟೆಬಾಗಿಲಿನಲ್ಲಿ ನಡೆದಿದೆ.
ಮೃತ ಯುವಕನನ್ನು ಶಾರಿಕ್ (18) ಎಂದು ಗುರುತಿಸಲಾಗಿದೆ. ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ಯುವಕ ವಾಸವಾಗಿದ್ದನು. ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದ ಶಾರಿಕ್ ಹೊರಗಡೆ ಬಾರದ ಕಾರಣ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಯುವಕ ಮೃತಪಟ್ಟಿದ್ದಾನೆ. ಶಾರಿಖ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ.