alex Certify ALERT : ರಾಜ್ಯದಲ್ಲಿ ಇನ್ಮುಂದೆ ಕಲರ್ ‘ಕಾಟನ್ ಕ್ಯಾಂಡಿ’ ಮಾರಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ರಾಜ್ಯದಲ್ಲಿ ಇನ್ಮುಂದೆ ಕಲರ್ ‘ಕಾಟನ್ ಕ್ಯಾಂಡಿ’ ಮಾರಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ..!

ಬೆಂಗಳೂರು : ರಾಜ್ಯದಲ್ಲಿ ಕಲರ್ ಕಾಟನ್ ಸಂಕ್ಯಾಂಡಿ ನಿಷೇಧ ಮಾಡಲಾಗಿದ್ದು, ಮಾರಾಟ ಹಾಗೂ ತಯಾರಿಸುವ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು .10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ Cotton Candy ಗಳ ಗುಣಮಟ್ಟ ಕೃತಕ ಬಣ್ಣಗಳ ಬೆರೆಸುವಿಕೆಯಿಂದಾಗಿ ಉತ್ತಮವಾಗಿಲ್ಲದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ Cotton Candy ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ದಿನಾಂಕ:12.02.2024 ರಿಂದ ಇದುವರೆಗೆ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 25 Candy ಮಾದರಿಗಳನ್ನು ಸಂಗ್ರಹಿಸಿ. ರಾಜ್ಯ ಪ್ರಯೋಗಾಲಯಗಳಲ್ಲಿ Cotton ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ.

ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ 15 Cotton Candy ಮಾದರಿಗಳು ಕೃತಕ ಬಣ್ಣದಿಂದ (ಟಾರ್ಟ್ರಾಸೈನ್ ಕೃತಕ ಬಣ್ಣ – 5 ಮಾದರಿಗಳು. ಸನ್ಸೆಟ್ ಯೆಲ್ಲೋ – 4 ಮಾದರಿಗಳು ಮತ್ತು ರೋಡಮೈನ್-ಬಿ ಹೊಂದಿರುವ ಮಾದರಿಗಳು – 6) ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದ್ದು, ಪ್ರಮಾಣಕ್ಕಿಂತ ಹೆಚ್ಚಿನ/ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ.

ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡಬಹುದಾಗಿರುತ್ತದೆ. The Food Safety and Standards (Food Products Standards and Food Additives) Regulations, 2011 ನಿಯಮಗಳಲ್ಲಿ ಪ್ರಮಾಣಕ್ಕಿಂತ ಹೆಚ್ಚಿನ/ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ. ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡಬಹುದಾಗಿರುತ್ತದೆ.

ಈ ಹಿನ್ನೆಲೆಯಲ್ಲಿ Cotton Candy ಯ ತಯಾರಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ/ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಆವಕಾಶವಿಲ್ಲದಿರುವುದರಿಂದ Cotton Candy ಯ ತಯಾರಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣಗಳನ್ನು ಬಳಸುವುದನ್ನು ಮತ್ತು ರೋಡಮೈನ್-ಬಿ ಸೇರಿದಂತೆ ಉಪಯೋಗಿಸಲು ಅವಕಾಶವಿಲ್ಲದೆ ಇರುವ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆದೇಶಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...