ಕೋವಿಡ್-19 ಇಡೀ ವಿಶ್ವಕ್ಕೆ ಆವರಿಸಿದ್ದಾಗ ಎಲ್ಲೆಲ್ಲೂ ಸ್ವಚ್ಛತೆಯ ಪರಿಭಾಷೆ ಶುರುವಾಯಿತು. ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಮಾಸ್ಕ್ ನಾವು ಊಹಿಸಿರದ ದೈನಂದಿನ ಸಹಚರರಾದವು. ಕೋವಿಡ್ ಕ್ರಮೇಣ ತಗ್ಗುತ್ತಾ ಬಂದರೂ ಅದರ ಆತಂಕ ಇಂದಿಗೂ ಹೋಗಿಲ್ಲ. ಆದ್ದರಿಂದ ಹಲವು ಜನರು ತಮ್ಮ ಮನೆಯಿಂದ ಹೊರ ಬರುವಾಗ ರಕ್ಷಣೆಯ ಸಾಧನವಾಗಿ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಇಟ್ಟುಕೊಳ್ಳುತ್ತಾರೆ.
ಇದರ ವಿಷಯ ಇಲ್ಲೇಕೆ ಎಂದರೆ ಈಗ ವೈರಲ್ ಆಗಿರುವ ವಿಡಿಯೋ ಈ ವಿಷಯ ಹೇಳುವಂತೆ ಮಾಡಿದೆ. ಟ್ವಿಟರ್ ಬಳಕೆದಾರರಾದ ಆಲಿಸ್, ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯುವತಿಯೊಬ್ಬಳು ಹ್ಯಾಂಡ್ ಸ್ಯಾನಿಟೈಸರ್ ಇಟ್ಟುಕೊಂಡಿದ್ದಾಳೆ. ಆದರೆ ಅಸಲಿಗೆ ಇದು ಸ್ಯಾನಿಟೈಸರ್ ಅಲ್ಲ, ಬದಲಿಗೆ ಆಲ್ಕೋಹಾಲ್ !
ಬೇರೆ ಯಾರಾದರೂ ನೋಡಿದರೆ ಸ್ಯಾನಿಟೈಸರ್ ನಂತೆ ಇದು ಕಾಣಿಸುತ್ತದೆ.
ಆದರೆ ಯುವತಿಯು ಹ್ಯಾಂಡ್ ಸ್ಯಾನಿಟೈಸರ್ ಪಂಪ್ ಕ್ಯಾಪ್ ಬಾಟಲ್ ಜೊತೆಗೆ ಗ್ಲಾಸ್ ಅನ್ನು ಹಿಡಿದುಕೊಂಡಿರುವುದನ್ನು ನೋಡಬಹುದು. ಎಲ್ಲಿ ಹೋದರೂ ಅದರಿಂದ ಬಾಟಲಿಗೆ ಮದ್ಯವನ್ನು ಹಾಕಿ ಕುಡಿಯುತ್ತಿದ್ದಾಳೆ. ಜನರನ್ನು ಮೂರ್ಖರನ್ನಾಗಿಸುತ್ತ ಹೇಗೆ ಈಕೆ ಅದನ್ನು ಪಾರ್ಟಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾಳೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಯುವತಿಯ ಬುದ್ಧಿವಂತಿಕೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಇದು ಅಸಾಧಾರಣ ಬುದ್ಧಿವಂತಿಕೆ ಎಂದಿದ್ದರೆ, ಇನ್ನು ಕೆಲವರು ಯುವತಿಯನ್ನು ಬೈದುಕೊಂಡಿದ್ದಾರೆ.
https://twitter.com/BashyMc1/status/1619714160555872261?ref_src=twsrc%5Etfw
https://twitter.com/BashyMc1/status/1619714160555872261?ref_src=twsrc%5Etfw