alex Certify ಮಹಿಳೆಯರ ಹೃದಯಕ್ಕೇ ಮಾರಕವಾಗ್ತಿದೆ ಮದ್ಯಪಾನ; ಹೊಸ ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಹೃದಯಕ್ಕೇ ಮಾರಕವಾಗ್ತಿದೆ ಮದ್ಯಪಾನ; ಹೊಸ ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ……!

ಮದ್ಯಪಾನ ಪ್ರತಿಯೊಬ್ಬರಿಗೂ ಅಪಾಯಕಾರಿಯೇ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಬೇಧವಿಲ್ಲ. ಆದರೆ ಮದ್ಯಪಾನವು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಅಸ್ವಸ್ಥರನ್ನಾಗಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆಲ್ಕೋಹಾಲ್‌ ಸೇವನೆಯಿಂದ ಮಹಿಳೆಯರ ಹೃದಯದ ಕಾಯಿಲೆಯ ಅಪಾಯವು ಗಮನಾರ್ಹವಾಗಿ ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯಲ್ಲಿ ಈ ಕುರಿತ ಸಂಶೋಧನಾ ವರದಿ ಮಂಡನೆಯಾಗಲಿದೆ. ಸಂಶೋಧಕರು 2014 ಮತ್ತು 2015ರ ಅವಧಿಯಲ್ಲಿ ಹೃದ್ರೋಗವನ್ನು ಹೊಂದಿರದ 430,000 ಕ್ಕೂ ಹೆಚ್ಚು ಜನರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಪ್ರಾಥಮಿಕ ಆರೈಕೆಯ ಸಮಯದಲ್ಲಿ ಆಲ್ಕೋಹಾಲ್ ಸೇವನೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸಂಶೋಧಕರು 4 ವರ್ಷಗಳ ನಂತರದ ಅವಧಿಯಲ್ಲಿ ಅವರ ಆರೋಗ್ಯ ಸ್ಥಿತಿಯನ್ನು ಹೋಲಿಕೆ ಮಾಡಿದ್ದಾರೆ.

ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಸುಮಾರು 3,108 ಮಂದಿ ಪರಿಧಮನಿಯ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೆಚ್ಚಿನ ಮಟ್ಟದ ಆಲ್ಕೊಹಾಲ್ ಸೇವನೆಯಿಂದ ಅಪಾಯದ ಮಟ್ಟವು ಹೆಚ್ಚಾಗಿರುತ್ತದೆ. ಮಹಿಳೆಯರಲ್ಲಿ ಅತಿ ಹೆಚ್ಚು ಆಲ್ಕೋಹಾಲ್ ಸೇವಿಸುವವರಲ್ಲಿ (ವಾರಕ್ಕೆ 8 ಅಥವಾ ಅದಕ್ಕಿಂತ ಹೆಚ್ಚು ಪಾನೀಯಗಳು) ಕಡಿಮೆ ಸೇವನೆ ಮಾಡುವವರಿಗಿಂತ (ವಾರಕ್ಕೆ 1 ಅಥವಾ 2 ಪಾನೀಯಗಳು) 45 ಪ್ರತಿಶತದಷ್ಟು ಅಧಿಕ ಹೃದಯದ ಕಾಯಿಲೆಯ ಅಪಾಯವಿದೆ. ಅಧಿಕ ಮದ್ಯ ಸೇವನೆಯನ್ನು ಮಾಡುವವರು ಮಧ್ಯಮ ಪ್ರಮಾಣದಲ್ಲಿ ಕುಡಿಯುವ ಮಹಿಳೆಯರಿಗಿಂತ 29 ಪ್ರತಿಶತದಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

‘ಬಿಂಜ್‌-ಡ್ರಿಂಕಿಂಗ್’ ವರ್ಗಕ್ಕೆ ಸೇರಿದವರಲ್ಲಿ ಹೃದ್ರೋಗದ ಸಮಸ್ಯೆಯ ಸಾಧ್ಯತೆ 68 ಪ್ರತಿಶತದಷ್ಟಿರುತ್ತದೆ. ‘ಬಿಂಜ್-ಡ್ರಿಂಕಿಂಗ್’ ಎಂದರೆ ಒಂದೇ ದಿನದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಮದ್ಯಪಾನ ಮಾಡುವುದು.

ಅಧ್ಯಯನದ ಪ್ರಕಾರ ಕುಡಿತದಿಂದ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ. ಆದರೆ ಪುರುಷರು ಸುರಕ್ಷಿತ ಎಂದರ್ಥವಲ್ಲ. ಹೆಚ್ಚು ಮದ್ಯಪಾನ ಮಾಡುವ ಪುರುಷರಲ್ಲಿ ಹೃದ್ರೋಗದ ಅಪಾಯವು ಇನ್ನೂ ಹೆಚ್ಚಾಗಿರುತ್ತದೆ. ಏಕೆಂದರೆ ಪ್ರತಿ ವರ್ಷ ಹೃದ್ರೋಗದಿಂದ ಸಾಯುವ ಪುರುಷರ ಸಂಖ್ಯೆ ತುಂಬಾ ಹೆಚ್ಚಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...